ಬ್ರ್ಯಾಂಡ್ ​ ಬೆಂಗಳೂರು ಹಾಸ್ಯಾಸ್ಪದ ಡಿಕೆಶಿ ಕುಟುಕಿದ ರೈತ ಸಂಘದ ಮುಖಂಡರು

27 KKP 8
Published on

ಕನಕಪುರ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗೆ ರಾಜಕೀಯ ಜನ್ಮ ನೀಡಿದ ಸಾತನೂರು ಕ್ಷೇತ್ರವನ್ನು ತಾಲೂಕು ಅಥವಾ ಉಪನಗರವನ್ನಾಗಿ ಮಾಡುವಂತೆ ಜನರು ಕೇಳುತ್ತಿದ್ದರು. ಇದರ ಬಗ್ಗೆ ತಲೆಕೆಡೆಸಿಕೊಳ್ಳದೆ, ಬ್ರ್ಯಾಂಡ್ ​​ ಬೆಂಗಳೂರು ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್​ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2006-07ರ ಅವಧಿಯಲ್ಲಿ ಸಾತನೂರು, ಬಿಡದಿ, ನಂದಗುಡಿ, ಸೋಲೂರು, ರಾಮನಗರವನ್ನು ನಗರವನ್ನಾಗಿ ಮಾಡಲು ಅಂದಿನ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಅವಧಿಯಲ್ಲಿ ಡಿ.ಕೆ. ಶಿವಕುಮಾರ್​ ಪ್ರತಿನಿಧಿಸಿದ್ದ ಸಾತನೂರನ್ನು ನಗರವಾಗಿ ಮಾರ್ಪಾಡು ಮಾಡಿದ್ದರೆ ಈ ಭಾಗದ ಭೂಮಿಗೆ ದುಪ್ಪಟ್ಟು ಬೆಲೆ ಬರುವುದರ ಜತೆಗೆ ಸ್ಥಳಿಯರಿಗೆ ಉದ್ಯೋಗವಕಾಶವೂ ದೊರೆಯುತ್ತಿತ್ತು.

ಇದಾವುದಕ್ಕೂ ಗಮನ ನೀಡದೆ, ರಾಜಕೀಯ ಅಸ್ತಿತ್ವಕ್ಕಾಗಿ ಜೆಡಿಎಸ್​ ಮತ್ತು ಬಿಜೆಪಿ ವಿರುದ್ಧ ಮಾತನಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. 5 ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸಲು ಆಗದೇ ಜನರ ದಿಕ್ಕು ತಪ್ಪಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ದೇವರಾಜ್​, ತಾಲೂಕು ಪ್ರಧಾನ ಕಾರ್ಯದರ್ಶಿ ಅನುಕುಮಾರ್​, ರೈತ ಮುಖಂಡರಾದ ರಮೇಶ್​, ಮುತ್ತಪ್ಪ, ಪ್ರಕಾಶ್​, ಶಿವಗೂಳಿಗೌಡ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net