ಶೀಘ್ರ ನಾಲ್ಕು ಜಿಲ್ಲೆಯಲ್ಲಿ ಶಾಖೆಗಳು ಆರಂಭ

ಹುನಗುಂದ ಪಟ್ಟಣದ ಶ್ರೀ ಗೌರಿಶಂಕರ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಉಪಾಧ್ಯಕ್ಷ ಯಮನಪ್ಪ ಚಲವಾದಿ ಅವರಿಗೆ ಚುನಾವಣಾಧಿಕಾರಿ ಬಿ.ಎನ್. ಪೊಲೀಸ್‌ಪಾಟೀಲ ಪ್ರಮಾಣಪತ್ರ ನೀಡಿದರು. ನಿರ್ದೇಶಕರಾದ ಅಮರೇಶ ನಾಗೂರ, ಗಂಗಾಧರ ದೊಡಮನಿ, ಪ್ರಧಾನ ವ್ಯವಸ್ಥಾಪಕ ಸಿದ್ದು ಭದ್ರಶೆಟ್ಟಿ ಇದ್ದರು.

Published on

ಹುನಗುಂದ: ಪಟ್ಟಣದ ಶ್ರೀ ಗೌರಿಶಂಕರ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಉಪಾಧ್ಯಕ್ಷರಾಗಿ ಯಮನಪ್ಪ ಚಲವಾದಿ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲ ಸದಸ್ಯರು ಸರ್ವಾನುಮತದಿಂದ ಈ ಆಯ್ಕೆ ಮಾಡಿದರು.

ನಂತರ ಮಾತನಾಡಿದ ಶಾಸಕ ಕಾಶಪ್ಪನವರ, ನಮ್ಮ ಗೌರಿಶಂಕರ ಬ್ಯಾಂಕ್ ಮುಂದಿನ 5 ವರ್ಷದ ಅವಧಿಯಲ್ಲಿ ನಾಲ್ಕು ಜಿಲ್ಲೆಯಲ್ಲಿ 25 ಶಾಖೆಗಳನ್ನು ಆರಂಭಿಸಲಿದೆ. 100 ಕೋಟಿ ರೂ. ದುಡಿಯುವ ಬಂಡವಾಳ ಹೊಂದಲಿದ್ದು, ರಾಜ್ಯಾದ್ಯಂತ ಬ್ಯಾಂಕ್ ಶಾಖೆಗಳನ್ನು ವಿಸ್ತರಿಸಲಿದೆ. ಬಡವರು, ಕಾರ್ಮಿಕರು, ರೈತರು, ನೇಕಾರರು, ಮಹಿಳೆಯರು, ಶೋಷಿತ ವರ್ಗದ ಜನರು, ನಿರುದ್ಯೋಗಿಗಳಿಗೆ ಆರ್ಥಿಕ ಸಹಾಯವನ್ನು ಸಂಸ್ಥೆಯಿಂದ ನೀಡಲಾಗುವುದು ಎಂದರು.

ಬ್ಯಾಂಕ್ ನಿರ್ದೇಶಕರಾದ ಅಮರೇಶ ನಾಗೂರ, ಗಂಗಾಧರ ದೊಡಮನಿ, ಮಲ್ಲಿಕಾರ್ಜುನ ಲೆಕ್ಕಿಹಾಳ, ನೂರಂದಗೌಡ ಕಲಗೋಡಿ, ಶಿವಪ್ಪ ಭದ್ರಶೆಟ್ಟಿ, ಪ್ರಭು ಇದ್ದಲಗಿ, ಮಹಾಂತೇಶ ಕಡಿವಾಲ, ನಿಂಗಪ್ಪ ಬಿದರಕುಂದಿ, ಸಂಗಮೇಶ ಹಾವರಗಿ, ಮಹಾಂತೇಶ ನರಗುಂದ, ಜಯಶ್ರೀ ತಳವಾರ, ರವೇಜ್ ಖಾಜಿ, ಶರಣು ಬೆಲ್ಲದ, ವೀಣಾ ಕಾಶಪ್ಪನವರ, ಅಕ್ಕಮ್ಮ ಪಾಟೀಲ, ಚುನಾವಣಾಧಿಕಾರಿ ಬಿ.ಎನ್. ಪೋಲಿಸ್‌ಪಾಟೀಲ, ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸಿದ್ದು ಭದ್ರಶೆಟ್ಟಿ, ಮ್ಯಾನೇಜರ್ ರಾಮಣ್ಣ ಅಂಬಿಗೇರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net