

ಬೆಳಗಾವಿ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಯುವ ಪ್ರಭಾಗದ ವತಿಯಿಂದ ಸೋಮವಾರ ಲಕ್ಷ್ಮೀನಗರ, ಗಣೇಶಪುರದಲ್ಲಿ ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ -20 ಯೋಜನೆಯಡಿಯಲ್ಲಿ ಶಾಂತಿಗಾಗಿ ಪಾದಯಾತ್ರೆ ಜರುಗಿತು.
ಶಾಂತಿ ಯಾತ್ರೆಯು ಬ್ರಹ್ಮಾ ಕುಮಾರಿಸ್ ಸೇವಾಕೇಂದ್ರ ಲಕ್ಷ್ಮಿ ನಗರದಿಂದ ಪ್ರಾರಂಭಿಸಿ ಅಮೃತ ಮಲಮ್ ಫ್ಯಾಕ್ಟರಿ, ಪೈಪ ಲೈನ್ ರೋಡ, ಗಣೇಶಪುರ ಹಾಗೂ ಲಕ್ಷ್ಮಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶಾಂತಿ ಯಾತ್ರೆಯನ್ನು ರಾಜಯೋಗಿನಿ ಬಿ.ಕೆ ಅಂಬಿಕಾ ಅಕ್ಕನವರು ಹಾಗೂ ಪಿಎಸ್‌ಐ ಗಂಗಮ್ಮ ಕಾಟೆ ರವರು ಚಾಲನೆ ನೀಡಿದರು. ಬಿಕೆ ಮೀನಾಕ್ಷಿ ಅಕ್ಕನವರು, ಬಿಕೆ ಮಹಾದೇವಿ ಅಕ್ಕನವರು, ಬಿಕೆ ಶ್ರೀಕಾಂತ, ಬಿಕೆ ನಿಲೇಶ, ಬಿಕೆ ಬಸವರಾಜ, ಬಿಕೆ ಪ್ರಕಾಶ, ಬಿಕೆ ಉಜ್ವಲ್ ಇತರರಿದ್ದರು.