ಬ್ರೈನೋಬ್ರೈನ್ ಸ್ಪರ್ಧೆ: ನುಷ್ಕಾ ಚಾಂಪಿಯನ್

nushka
Published on

ಮಡಿಕೇರಿ: ಬ್ರೈನೋಬೈನ್ ಇಂಟರ್‌ನ್ಯಾಷನಲ್ ವತಿಯಿಂದ ದೆಹಲಿಯ ತ್ಯಾಗ ರಾಜ್ ಸ್ಟೇಡಿಯಂನಲ್ಲಿ ನಡೆದ ೪೩ನೇ ರಾಷ್ಟ್ರಮಟ್ಟದ ಬ್ರೈನೋಬೈನ್ ಅಬಕಾಸ್ ಸ್ಪರ್ಧೆ-೨೦೨೪ ರಲ್ಲಿ ಮಡಿಕೇರಿಯ ಬ್ರೈನೋಬೈನ್ ಕೇಂದ್ರದ ನುಷ್ಕಾ ಕಾವೇರಮ್ಮ ಕೊಡಂದೇರ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾಳೆ.


ಬ್ರೈನೋಬೈನ್ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಮ್, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂರವರು ನುಷ್ಕಾಳಿಗೆ ಪದಕ ಪ್ರದಾನ ಮಾಡಿದರು.


ನುಷ್ಕಾ ಕೊಡಂದೇರ ಬ್ರೈನೋಬೈನ್ ಮಡಿಕೇರಿ ಕೇಂದ್ರದ ಮುಖ್ಯಸ್ಥರು ಹಾಗೂ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರಿಂದ ತರಬೇತಿ ಪಡೆದಿದ್ದಾಳೆ. ಮೈಸೂರಿನ ಐ ಕೇನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ೬ ವರ್ಷದ ನುಷ್ಕಾ ಕೊಡಂದೇರ ವಿಕ್ರಮ್ ಕುಟ್ಟಯ್ಯ ಹಾಗೂ ಕಾವ್ಯ ದಂಪತಿ ಪುತ್ರಿಯಾಗಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯ ೩೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net