ಕಾಯಿಲೆ ನಿರ್ಲಕ್ಷ್ಯ ಸಲ್ಲ

program
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಜಾಲಪ್ಪನವರ ವೃದ್ಧಾಶ್ರಮದಲ್ಲಿ ಮೆದುಳಿನ ಕಾಯಿಲೆ ಬಗ್ಗೆ ವೃದ್ಧರಿಗೆ ಡಾ.ಶಾಂತಲಾ ವಿವರಿಸಿದರು. ಮಾನಸಿಕ ರೋಗ ತಜ್ಞ ಡಾ.ಗಿರೀಶ್, ದೊಡ್ಡಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ನಾಗನಾಥ ಇದ್ದರು
Published on

ತೂಬಗೆರೆ: ಮನೆಗಳ ಹತ್ತಿರ ಚರಂಡಿಗಳನ್ನು ಸ್ವಚ್ಛವಾಗಿ ಇಡದಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗಿ ಆದರಿಂದ ಜ್ವರ, ತಲೆನೋವು ಕಾಯಿಲೆಗಳು ಬರುತ್ತದೆ ಎಂದು ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಶಾಂತಲಾ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಜಾಲಪ್ಪನವರ ವೃದ್ಧಾಶ್ರಮದಲ್ಲಿ ಜಾಗತಿಕ ಮೆದುಳಿನ ಕಾಯಿಲೆ ಬಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು.ಮರೆವಿನ ಕಾಯಿಲೆ 60ವರ್ಷದ ನಂತರ ಎಲ್ಲ ಜನರಿಗೆ ಬರುವಂಥದ್ದು. ಈ ಕಾಯಿಲೆಗೆ ಜಾಗತಿಕ ಜಾಗೃತಿ ದಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಯಾವುದೇ ಕಾಯಿಲೆ ಬಂದರೂ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಸಬೇಕು ಎಂದು ಹೇಳಿದರು.ತೂಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂರ್ಣಿಮಾ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net