

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ. 18, 19ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಸಂಭ್ರಮ ಹಾಗೂ ವಿಶ್ವಾಮಿತ್ರ ಬ್ರಾಹ್ಮಣ ಮಹಾ ಸಮ್ಮೇಳನ ನಿಮಿತ್ತ ಶ್ರೀ ವಿಶ್ವ ವಿಪ್ರ ಸೇವಾ ಟ್ರಸ್ಟ್ ಹಾಗೂ ಧಾರವಾಡದ ಶ್ರೀ ಚಿದಂಬರ ಸೇವಾ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಸಲಾಯಿತು.
ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಬೇಕು. ಸಮುದಾಯ ಒಗ್ಗಟ್ಟಾದರೆ ಸಾಮಾಜಿಕ ಪ್ರಗತಿ ಸಾಧ್ಯ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಸಮ್ಮೇಳನ ಯಶಸ್ಸಿಗೊಳಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಅರವಿಂದ ಪೂಜಾರ, ಅಶ್ವತ್ಥ ನಾರಾಯಣ, ಸುಧೀಂದ್ರ ದೇಶಪಾಂಡೆ, ಉಷಾತಾಯಿ ಮಳಗಿ, ಪ್ರೊ. ಸಿ.ಆರ್.ಜೋಶಿ, ವೇಮೂ. ಸತ್ಯನಾರಾಯಣಾಚಾರ್ಯ ಗುರೂಜಿ, ಆರ್.ಡಿ.ಕುಲಕರ್ಣಿ ಸಮ್ಮೇಳನದ ಯಶಸ್ಸು ಹಾಗೂ ಸಮುದಾಯದ ಸಂಘಟನೆ ಕುರಿತು ಮಾತನಾಡಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಿ. ರಘುನಾಥ್, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಪ್ರೊ. ದುಷ್ಯಂತ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು.
ಡಾ. ವೆಂಕಟರಾವ ಕುಲಕರ್ಣಿ, ಮಹೇಶ, ಸುರೇಶ ಕುಲಕರ್ಣಿ, ಗಿರೀಶ ಜೋಶಿ, ಮುರಳಿಧರ, ಸತೀಶ ಹುದ್ದಾರ, ವಾದಿರಾಜ, ಮೃತ್ಯುಂಜಯ ದೇಶಪಾಂಡೆ, ಅನಂತ ಕುಲಕರ್ಣಿ, ಅರವಿಂದ ಕುರ್ತಕೋಟಿ, ಡಾ. ಭಾಸ್ಕರ ಪಾಟೀಲ, ಸಂಜೀವ ಜೋಶಿ, ಚಿದಂಬರ ದೀಕ್ಷಿತ್, ಮನೋಜ ದೇಸಾಯಿ, ಡಾ.ಸಾಂದೀಪನಿ ಬಂಕಾಪುರ, ವಿಜಯ ಮಠ, ಪ್ರಕಾಶ ಇನಾಮದಾರ, ವೆಂಕಟೇಶ ಬಿದರಳ್ಳಿ, ಪ್ರಭಾ ಸತ್ತಿಗೇರಿ, ವೆಂಕಟೇಶ ಶಿವಪೂಜಿ, ಇತರರು ಇದ್ದರು.
ಪವನ ದೇಸಾಯಿ ಸ್ವಾಗತಿಸಿದರು. ಭಾಗ್ಯಶ್ರೀ ಹುದ್ದಾರ ನಿರೂಪಿಸಿದರು. ಅಂಬರೀಷ ಹಾನಗಲ್ ವಂದಿಸಿದರು.