ಬ್ರಹ್ಮಾವರ ಗಾಂಧಿ ಮೈದಾನ ಆವರಣ ಗೋಡೆ ಕುಸಿತ

bmr
Published on

ಬ್ರಹ್ಮಾವರ: ಗುರುವಾರ ಸುರಿದ ಭಾರಿ ಮಳೆಗೆ ಬ್ರಹ್ಮಾವರ ಗಾಂಧಿ ಮೈದಾನದ ಪೂರ್ವದಿಕ್ಕಿನ ಆವರಣಗೋಡೆ ಭಾಗಶಃ ಕುಸಿದು ಬಿದ್ದಿದೆ.

ಮೈದಾನದ ಪೂರ್ವ ಮತ್ತು ಉತ್ತರ ಭಾಗ ತಗ್ಗುಪ್ರದೇಶವಾದ ಕಾರಣ ಭಾರೀ ಮಳೆಯಿಂದಾಗಿ ನೀರು ಶೇಖರಣೆಗೊಂಡು ಗೋಡೆ ಕುಸಿದಿದೆ. ಇದರ ಪರಿಣಾಮ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ನೀರು ನುಗ್ಗಿ ನಿಲಯದ ಗ್ಯಾಸ್ ಸಿಲಿಂಡರ್ ಸೇರಿದಂತೆ ಅನೇಕ ವಸ್ತುಗಳು ನೀರಲ್ಲಿ ತೇಲಾಡುತ್ತಿದ್ದವು. ಗುರುವಾರ ರಾತ್ರಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳನ್ನು ಹಂದಾಡಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸ್ಥಳಾಂತರ ವಾಡಲಾಯಿತು.

ಕಂದಾಯ ನಿರೀಕ್ಷಕ ರಾಜು, ಬ್ರಹ್ಮಾವರ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾ ಅಧಿಕಾರಿ ಎಚ್.ವಿ.ಇಬ್ರಾಹಿಂಪುರ, ಗ್ರಾಮ ಆಡಳಿತಾಧಿಕಾರಿ ಮಹೇಂದ್ರ ಆಚಾರ್ಯ, ಅಭಿವೃದ್ಧಿ ಅಧಿಕಾರಿ ಆದರ್ಶ ಶೆಟ್ಟಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net