

ಕಿಕ್ಕೇರಿ: ಇಲ್ಲಿನ ಬ್ರಹ್ಮೇಶ್ವರ ದೇಗುಲದ ಉತ್ಸವ ಮೂರ್ತಿಗಳಾದ ಶಿವ, ಪಾರ್ವತಿ ದೇವಿಯ ಮೆರವಣಿಗೆ ಗುರುವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ ಅನ್ನದಾಸೋಹ ಏರ್ಪಡಿಸಲಾಗಿತ್ತು. ಕೋಟೆ ಗಣಪತಿ ಬೀದಿ, ರಥ ಬೀದಿ, ಹೊಸಬೀದಿಗಳಲ್ಲಿ ನಾದಸ್ವರದೊಂದಿಗೆ ಮೆರವಣಿಗೆ ಸಾಗಿತು. ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವರಿಗೆ ವಿವಿಧ ಆಭರಣ, ವಸ್ತ್ರ, ಪುಷ್ಪಮಾಲೆಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಾಮದ ಪ್ರತಿ ಮನೆಯಲ್ಲೂ ದೇವಿಗೆ ಹಣ್ಣು, ಕಾಯಿ ಅರ್ಪಿಸಿ, ಆರತಿ ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲಾಯಿತು.