ಅಧ್ಯಕ್ಷರಾಗಿ ಮಂಜುನಾಥ್ ಟಿ. ಆಯ್ಕೆ

manjunath
ಮಂಜುನಾಥ್ ಟಿ.
Published on

ಹೆಬ್ರಿ: ಮುನಿಯಾಲು ಮಾತಿಬೆಟ್ಟು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ 2024- 25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹರೀಶ ಪೂಜಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಉದ್ಯಮಿ ಮಂಜುನಾಥ್ ಟಿ., ಪ್ರಧಾನ ಕಾರ್ಯದರ್ಶಿಯಾಗಿ ರತ್ನಾಕರ ಪೂಜಾರಿ ಪೆರ್ಮಾನ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ, ಕೋಶಾಧಿಕಾರಿಯಾಗಿ ರಾಜು ಪೂಜಾರಿ, ಜತೆ ಕಾರ್ಯದರ್ಶಿಯಾಗಿ ಭಾಸ್ಕರ್ ಮಾಬಿಯಾನ್ ಆಯ್ಕೆಯಾದರು.

ಗೌರವಾಧ್ಯಕ್ಷರಾದ ಎಸ್.ಟಿ.ಕುಂದರ್, ಸ್ಥಾಪಕ ಅಧ್ಯಕ್ಷ ಎಂ.ಆನಂದ ಪೂಜಾರಿ, ವಿಠ್ಠಲ ಪೂಜಾರಿ ವರಂಗ, ಮಂಜುನಾಥ ಕೆ.ಕಾಡುಹೊಳೆ, ಸತೀಶ್ ಪೂಜಾರಿ ಎಳ್ಳಾರೆ, ಸಂಜೀವ ಪೂಜಾರಿ ಕಂಟೆಬೆಟ್ಟು, ಪ್ರದೀಪ್ ಡಿ.ಸಾಲಿಯಾನ್, ಪ್ರಕಾಶ್ ಪೂಜಾರಿ ವರಂಗ, ಚೆಲುವಯ್ಯ ಪೂಜಾರಿ ವರಂಗ, ಶಂಕರ ಪೂಜಾರಿ ಪಡುಕುಡೂರು, ವಸಂತ ಪೂಜಾರಿ ಮಾತಿಬೆಟ್ಟು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net