

ಬೆಳ್ತಂಗಡಿ: ಪ್ರಕೃತಿಯ ಮಡಿಲಲ್ಲಿ ನಿರ್ಮಾಣವಾದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಜಿಲ್ಲೆಯಲ್ಲಿ ಮತ್ತೊಂದಿರಲು ಸಾಧ್ಯವಿಲ್ಲ. ಶಂಕರಾಚಾರ್ಯರು ದೇಶ ಪರ್ಯಟನೆ ಮಾಡಿ ಹಿಂದು ಸಮಾಜಕ್ಕೆ ಶಕ್ತಿ ತುಂಬಿಸುವ ಕೆಲಸ ಮಾಡಿದಾಗೆ, ಬ್ರಹ್ಮಶ್ರೀ ನಾರಾಯಣ ಗುರುಗಳು ಕುದ್ರೋಳಿ ದೇವಸ್ಥಾನದ ಮೂಲಕ ದ.ಕ ಜಿಲ್ಲೆಯಲ್ಲಿ ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ.ಎಲ್ಲರ ಸಹಕಾರದಲ್ಲಿ ಮಂದಿರ ನಿರ್ಮಾಣವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಯುವ ಬಿಲ್ಲವ ವೇದಿಕೆ ಮತ್ತು ಯುವವಾಹಿನಿ ಸಂಚಲನಾ ಸಮಿತಿ ಮಿತ್ತಬಾಗಿಲು- ಮಲವಂತಿಗೆ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕ ಬ್ರಹ್ಮಶ್ರೀ ಗುರು ಭವನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಗುರುಭವನ ಉದ್ಘಾಟಿಸಿದರು. ರಂಜನ್ ಜಿ.ಗೌಡ, ವಾಸುದೇವ ರಾವ್ ಕಕ್ಕೆನೇಜಿ, ಶಿವಾನಂದ ರಾವ್, ಸದಾನಂದ ಪೂಜಾರಿ ಉಂಗಿಲಬೈಲು, ಬಂಗಾಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ, ನಾರಾಯಣ ಶೆಟ್ಟಿ, ಮಿತ್ತಬಾಗಿಲು ಗ್ರಾಪಂ ಅಧ್ಯಕ್ಷ ವಿನಯಚಂದ್ರ, ಗುರುನಾರಾಯಣ ಸೇವಾ ಸಂಘ ಬಜ್ಪೆ ಘಟಕದ ಪದಾಧಿಕಾರಿಗಳು, ಕಲಶಾಭಿಷೇಕ ಸಮಿತಿ ಅಧ್ಯಕ್ಷ ಮುಕುಂದ ಸುವರ್ಣ, ಭರತ್ ಎಪಿಎಂಸಿ, ಡಾ.ಪ್ರದೀಪ್ ಆರೋಗ್ಯ ಕ್ಲಿನಿಕ್ ನಾವೂರು, ಗಣೇಶ್ ಪೂಜಾರಿ, ನಾವೂರು ಗ್ರಾಪಂ ಮಾಜಿ ಅಧ್ಯಕ್ಷ ಗಣೇಶ್ ಗೌಡ, ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಮಾಜಿ ನಿರ್ದೇಶಕ ಗಂಗಾಧರ ಪರಾರಿ ಇಂದಬೆಟ್ಟು, ಗಣೇಶ್ ಪ್ರಭು ನಾವೂರ ಹಾಗೂ ಗ್ರಾಮಸ್ಥರು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲ ಜಾತಿ-ಧರ್ಮ ಒಟ್ಟು ಗೂಡಿಕೊಂಡು ಇರುವುದೇ ನಮ್ಮ ದೇಶಕ್ಕೆ ಗೌರವ. ನಾವು ಜಾತಿ ಧರ್ಮ ನೋಡದೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಿದರೆ ಗುರುಗಳ ತತ್ವ ಪಾಲನೆ ಮಾಡಿದಂತೆ. ಆಡಂಬರ ಮಾಡದೆ, ನಾರಾಯಣ ಗುರುಗಳ ತತ್ವದ ಪ್ರಕಾರ, ವಿದ್ಯಾಭ್ಯಾಸಕ್ಕೆ ಸ್ಥಳೀಯವಾಗಿ ಯಾರಿಗೆ ಕಷ್ಟ ಇದೆ, ಜಾತಿ ಮತ ಧರ್ಮ ನೋಡದೆ, ಸಹಾಯವಾಗಿ. ನಮ್ಮ ‘ಗುರು ಬೆಳದಿಂಗಳು’ ಎಂಬ ಫೌಂಡೇಷನ್ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ತಯಾರಿದೆ. ಪದ್ಮರಾಜ್ ಆರ್.ಪೂಜಾರಿ ಅಧ್ಯಕ್ಷರು, ಗುರು ಬೆಳದಿಂಗಳು ಫೌಂಡೇಷನ್ ಕುದ್ರೋಳಿ https://www.vijayavani.net/road-safety-campaign-programme https://www.vijayavani.net/application-invitation-for-admission-to-residential-schools