ಸಿದ್ದಾರೂಢರ ಸಮಕಾಲಿನವರಾಗಿದ್ದವರು ಬ್ರಹ್ಮಾನಂದರು

rbk 16-1 visit
ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮಕ್ಕೆ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಜಗದ್ಗುರುಗಳು ಭೇಟಿ ನೀಡಿ ಮಾತನಾಡಿದರು. ಗುರುಸಿದ್ಧೇಶ್ವರ ಶ್ರೀಗಳು, ಶೇಗುಣಸಿ ಮಹಾಂತ ದೇವರು ಇದ್ದರು.
Published on

ರಬಕವಿ/ಬನಹಟ್ಟಿ: ಶಿವಾನಂದ ಶ್ರೀಗಳು ಹಾಗೂ ಹುಬ್ಬಳ್ಳಿ ಸಿದ್ದಾರೂಢರ ಕಾಲಗಟ್ಟದಲ್ಲಿ ಮಹಾನ ತಪಶ್ವಿಗಳು ಆದ ಶ್ರೀ ಗುರುದೇವ ಬ್ರಹ್ಮಾನಂದ ಶ್ರೀಗಳು ಅವರ ಸಮಕಾಲಿನವರಾಗಿದ್ದರು ಎಂದು ಸುತ್ತೂರ ಶ್ರೀಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಹೇಳಿದರು.

ಸೋಮವಾರ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಒಬ್ಬ ಸಾಮಾನ್ಯ ಮನುಷ್ಯನೂ ಶಿವನ ಸಾಕ್ಷಾತ್ಕಾರ ಪಡೆದುಕೊಳ್ಳಬೇಕಾದಾರೆ ಶುದ್ಧ ಮನಸ್ಸು, ಕಾಯ ಸರಿ ಇರಬೇಕು. ಅಂದಾಗ ಮಾತ್ರ ಶಿವನೊಲಿಯುವನು. ಆದರೆ ಇಂದಿನ ಮಾಧ್ಯಮಗಳಲ್ಲಿ ತಾವೆಲ್ಲರೂ ನೋಡುತ್ತಿದ್ದೀರಿ, ನುಡಿದಂತೆ ಯಾರೂ ನಡೆಯುತ್ತಿಲ್ಲ ಎಂದು ತಿಳಿಸಿದರು.

ಮನುಷ್ಯ ಕೇವಲ ನೆಮ್ಮದಿ ಬಯಸಿದರೆ ಆತನ ಮನಸ್ಸು ಕೂಡ ಶುದ್ಧವಾಗಿರಬೇಕು. ಇವೆರಡೂ ಶುದ್ಧವಿದ್ದಾಗ ಮನಸ್ಸು ಹಗುರವಾಗಿ ಸಂತೋಷವಾಗಿರಲು ಸಾಧ್ಯ ಎಂದರು.

ಡಿ.29 ರಿಂದ ಜ.14 ರ ವರೆಗೆ ನಡೆಯುವ ರಬಕವಿ ಬ್ರಹ್ಮಾನಂದ ಆಶ್ರಮದ ಗುರುಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಸೋಮವಾರ ಭೇಟಿ ನೀಡಿ ನೂರಾರು ಭಕ್ತರಿಗೆ ಆಶೀರ್ವದಿಸಿದರು.

ಶ್ರೀಮಠದ ಮಠಾಧೀಶ ಗುರುಸಿದ್ಧೇಶ್ವರ ಶ್ರೀಗಳು ಮಠವನ್ನು ಅಚ್ಚುಕಟ್ಟಾಗಿ ಬೆಳೆಸಿದ್ದಾರೆ. ಈ ಮಠ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.

ಶೇಗುಣಶಿಯ ಶ್ರೀ ಮಹಾಂತ ದೇವರು, ಹೊಸೂರಿನ ಪರಮಾನಂದ ಶ್ರೀಗಳು ಹಾಗೂ ಶ್ರೀ ಗುರುಸಿದ್ಧೇಶ್ವರ ಶ್ರೀಗಳು, ನಗರದ ಹಲವಾರು ಮಹಿಳಾ ಮಂಡಳದವರು, ಹಿರಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net