ಅಖಿಲ ಕರ್ನಾಟಕ ಬ್ರಾಹ್ಮಣ ಯುವಕರ ಸಂಘ ಲೋಕರ್ಪಣೆ: ಧರ್ಮ ಉಳಿಯಲು ಸಂಘಟನೆ ಅಗತ್ಯವೆಂದರು ವಿದ್ಯಾರಣ್ಯ ಭಾರತೀ ಸ್ವಾಮೀಜಿ

Brahmana
Published on

ಬೆಂಗಳೂರು: ಶಂಕರಚಾರ್ಯರು ಇಲ್ಲದೇ ಹೋಗಿದ್ದಾರೆ ಹಿಂದೂ ಧರ್ಮ ಉಳಿಯುತ್ತಿರಲಿಲ್ಲ, ನಮ್ಮಲ್ಲಿ ಯಾವುದೇ ಭಿನ್ನಮತ ಬೇಡ ಎಂದು ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರು ಕರೆ ನೀಡಿದರು.

ಇಂದು ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಯುವಕರ ಸಂಘ ಲೋಕರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ ಮಾತನಾಡಿದ ಶ್ರೀ ರಾಮಾನುಜ ಜೀಯರ್ ಸ್ವಾಮೀಜಿ ಅವರು ಶಂಕರಚಾರ್ಯ, ರಾಮಾನುಜಚಾರ್ಯ, ಮಾಧ್ವಚಾರ್ಯರು ಹಿಂದೂ ಧರ್ಮ ಮತ್ತು ವೇದವನ್ನು ಉಳಿಸಿದರು ಎಂದರು.

ಕೂಡಲಿ ಕ್ಷೇತ್ರದ ಪ.ಪೂ. ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿಗಳು, ಯದುಗಿರಿ ಯತಿರಾಜ‌ ಮಠದ ಶ್ರೀ ರಾಮಾನುಜ ಜೀಯರ್ ಸ್ವಾಮಿಗಳು, ಶ್ರೀಪಾದ ರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಸ್ವಾಮಿಗಳು, ಪಾವಗಡ ಪ್ರಕಾಶ್ ರಾವ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಬ್ರಾಹ್ಮಣ ಸಮುದಾಯದ ಹಿರಿಯ ಮುಖಂಡರಾದ ಲಕ್ಷ್ಮೀಕಾಂತ್ , ಹೆಚ್.ಸಿ.ಕೃಷ್ಣ, ನೀರಾವರಿ ನಿಗಮಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಶಂಕರ್ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಯುವಕರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮಣಿಕಂಠಶರ್ಮರವರು ದೀಪಾ ಬೆಳಗಿಸಿ, ಸಂಘದ ಲಾಂಛನ ಬಿಡುಗಡೆ ಮಾಡಿದರು.

ಪ್ರತಿಭಾವಂತ ಬ್ರಾಹ್ಮಣ ಸಮುದಾಯದವರಿಗೆ ವೇದರತ್ನ ಮತ್ತು ಸಮಾಜ ಸೇವೆ ಸಲ್ಲಿಸಿದವರಿಗೆ ಸಮಾಜರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೂಡಲಿ ಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳು, ಸೃಷ್ಟಿಗಿಂತಗಲು ಮುಂಚೆ ವೇದವಿದೆ. ಸನಾತನ ಧರ್ಮವೆ ವೇದವಾಗಿದೆ. ಎಲ್ಲ ಕಾಲದಲ್ಲಿಯೂ ವೇದವಿದೆ. ಗಾಯಿತ್ರಿ ಮಂತ್ರವನ್ನು ಪಠನೆ ಮಾಡುವುದರಿಂದ ಸಂಕಷ್ಟ ನಿವಾರಣೆಯಾಗುತ್ತದೆ. ಧರ್ಮ ಉಳಿಯಬೇಕಾದರೆ ಎಲ್ಲರು ಸಂಘಟನೆಯಾಗಬೇಕು. ಬ್ರಾಹ್ಮಣ ಯುವಕ ಸಂಘದ ಜೊತೆಯಲ್ಲಿ ಬ್ರಾಹ್ಮಣ ಯುವತಿಯರ ಸಂಘವಾಗಿ ಸಮಾಜದಲ್ಲಿ ಬ್ರಾಹ್ಮಣ ಯುವತಿಯರು ಮುಂದೆ ಬರಬೇಕು. ಶಂಕರಚಾರ್ಯ ಇಲ್ಲದೇ ಹೋಗಿದ್ದಾರೆ ಹಿಂದೂ ಧರ್ಮ ಉಳಿಯುತ್ತಿರಲಿಲ್ಲ. ನಮ್ಮಲ್ಲಿ ಭಿನ್ನಮತ ಬೇಡ, ಬ್ರಾಹ್ಮಣರು ಎಲ್ಲರು ಒಂದೇ ಎಂದು ಹೇಳಿದರು.

ಯತಿರಾಜ ಮಠದ ಶ್ರೀ ರಾಮಾನುಜ ಜೀಯರ್ ಸ್ವಾಮಿಗಳು ಮಾತನಾಡಿ ಬ್ರಾಹ್ಮಣ ಸಮುದಾಯ ಒಂದು ಶಕ್ತಿಯಾಗಿ ರೂಪಗೊಳ್ಳಬೇಕು. ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ಸಂಘ ದಾರಿ ದೀಪವಾಗಲಿ. ಮಠಗಳ ಸಂಸ್ಕೃತಿ, ಸಂಪ್ರದಾಯ ವಿಭಿನ್ನವಾದರೂ ಎಲ್ಲ ಮಠಗಳು ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ಶಂಕರಚಾರ್ಯ, ರಾಮಾನುಜಚಾರ್ಯ, ಮಾಧ್ವಚಾರ್ಯ ಹಿಂದೂ ಧರ್ಮ ಮತ್ತು ವೇದವನ್ನ ಉಳಿಸಿದರು ಎಂದರು.

ಶ್ರೀ ಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಸ್ವಾಮೀಜಿರವರು ಮಾತನಾಡಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ದೀಪ ಹಚ್ಚುವ ಮೂಲಕ ಜ್ಞಾನ ಹಾಗೂ ಸಂಘಟನೆಯನ್ನು ಬ್ರಾಹ್ಮಣರಲ್ಲಿ ಮೂಡುವ ಪರಿಸರವನ್ನು ಸಂಘ ಮಾಡಲಿ. ಅರ್ಚಕರು ವೃತ್ತಿ ಮಾಡಲು ಇಂದು ಯಾರು ಮುಂದೆ ಬರುತ್ತಿಲ್ಲ. ಅರ್ಚಕರು ಇಲ್ಲವೆಂದರೆ ದೇವಸ್ಥಾನ ಪೂಜಾ ಕಾರ್ಯ ಇಲ್ಲ, ಸಂಸ್ಕೃತಿ ಸಹ ಉಳಿಯುವುದಿಲ್ಲ. ಆದ್ದರಿಂದ ಅರ್ಚಕ ವೃತ್ತಿಯನ್ನ ಇಂದಿನ ಯುವಕರಿಗೆ ಕಲಿಸಬೇಕು ಎಂದು ಹೇಳಿದರು.

ರಾಜ್ಯಾಧ್ಯಕ್ಷರಾದ ಮಣಿಕಂಠ ಶರ್ಮರವರು ಮಾತನಾಡಿ ಬ್ರಾಹ್ಮಣ ಸಮುದಾಯ ಎಲ್ಲ ವರ್ಗ, ಧರ್ಮದವರ ಪ್ರೀತಿ ಪಾತ್ರರಾಗಿದ್ದಾರೆ. ಸಮುದಾಯದ ಯುವಕರು ಒಗ್ಗಟಾಗಿ ಸಮಾಜ ಅಭಿವೃದ್ದಿ ಶ್ರಮಿಸಬೇಕು. ನಮ್ಮ ಸಂಘಟನೆ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರನ್ನು ಮುಖ್ಯವಾಹಿನಿಗೆ ತರಲು ಮತ್ತು ಬ್ರಾಹ್ಮಣರ ವಿರುದ್ಧ ದೌರ್ಜನ್ಯ ತಡೆಗಟ್ಟಲು ನಮ್ಮ ಹೋರಾಟ ನಡೆಯಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net