ಆ.15ಕ್ಕೆ ಆಟಿಡೊಂಜಿ ವಿಪ್ರಕೂಟ

udp-vipra
Published on

ಉಡುಪಿ: ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಆಟಿಡೊಂಜಿ ವಿಪ್ರಕೂಟ ಸಂಭ್ರಮಾಚರಣೆ ಆ.15ರಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 2ಗಂಟೆವರೆಗೆ ಕನ್ನರ್ಪಾಡಿ ಶ್ರೀದೇವಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಭಾ ಅಧ್ಯಕ್ಷ ಶ್ರೀಕಾಂತ್​ ಉಪಾಧ್ಯಾಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 9.30ಕ್ಕೆ ಮಾಹೆ ಉಪಕುಲಪತಿ ಡಾ. ಕೆ. ಶರತ್​ ರಾವ್​ ಉದ್ಘಾಟಿಸಲಿದ್ದಾರೆ. ಮುನಿಯಾಲು ಆಯುವೇದ ಕಾಲೇಜು ಪ್ರಾಧ್ಯಾಪಕ ಹೆರ್ಗ ಹರಿಪ್ರಸಾದ್​ ಭಟ್​, ಮಾಜಿ ಶಾಸಕ ಕೆ. ರುಪತಿಭಟ್​, ಉದ್ಯಮಿ ರಮೇಶ್​ ಬೀಡು, ನಗರಭಾ ಸದಸ್ಯ ಕೃಷ್ಣರಾವ್​ ಕೊಡಂಚ, ಚಿತ್ರನಟಿ ರಾಧಿಕಾ ನಾರಾಯಣ್​ ಮೊದಲಾದವರು ಭಾಗವಹಿಸಲಿದ್ದಾರೆ. 10.30ರಿಂದ 12.30ರವರೆಗೆ ಸಮೂಹ ನೃತ್ಯ, 12.30ಕ್ಕೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್​ ಭಟ್​, ಕೋಶಾಧಿಕಾರಿ ಹಯವದನ ಭಟ್​, ಪ್ರಮುಖರಾದ ಶ್ರೀನಿವಾಸ ಬಲ್ಲಾಳ್​, ರಾಜೇಂದ್ರ ಕೆ. ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net