

ಹುಬ್ಬಳ್ಳಿ: ಇಲ್ಲಿಯ ಗೋಕುಲ ರೋಡ ಬ್ರಾಹ್ಮಣ ಸಮಾಜ ಸೇವಾ ಸಂವು ಅಧಿಕ ಮಾಸದ ನಿಮಿತ್ತ 33 ಜನ ಹಿರಿಯ ದಂಪತಿಗೆ ನಮನ ಹಾಗೂ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಅತಿಥಿಯಾಗಿ ಮಾತನಾಡಿದ ಪ್ರೊ. ಎಂ.ವಿ. ಯಕ್ಕುಂಡಿ ಅವರು, ಅಧಿಕ ಮಾಸ ಎನ್ನುವುದು ಮಹಾಭಾರತ ಕಾಲದಲ್ಲಿಯೇ ಬಳಕೆಯಾಗಿದೆ. ಇದನ್ನು ಭೀಷ್ಮ ಪಿತಾಮಹರು ತಿಳಿಸಿದ್ದು, ಪಾಂಡವರು ಅಜ್ಞಾತ ವಾಸದಲ್ಲಿ ಇರುವಾಗ ದುಯೊರ್ಧನನು ಅವರನ್ನು ಕಂಡು ಹಿಡಿದು ಅವರ ಅಜ್ಞಾತವನ್ನು ಭಂಗಗೊಳಿಸಲು ಪ್ರಯತ್ನಿಸಿ ಸಲನಾಗುವನು.
ಆಗ ಅಜ್ಞಾತವಾಸ ಮುಗಿದಿಲ್ಲ ಎಂದು ವಾದ ಮಾಡಿದಾಗ, ಅದರ ಬಗ್ಗೆ ತಿಳಿ ಹೇಳಿ ಪಾಂಡವರ ಅವಧಿಯು ಹೆಚ್ಚಾಗಿದ್ದು ವರ್ಷದ ಲೆಕ್ಕಾಚಾರದಲ್ಲಿ ಅಧಿಕ ದಿನಗಳು ಬಂದಿರುವ ವಿಷಯ ತಿಳಿಸಿ ಅವರ ಅಜ್ಞಾತ ವಾಸವು ಮುಗಿದಿದೆ ಎಂದು ಹೇಳಿರುವುದು ಉಲ್ಲೇಖವಾಗಿದೆ ಎಂದರು.
ಒಂದು ವರ್ಷದಲ್ಲಿ 345 ದಿನಗಳಿದ್ದು ಪ್ರತಿ ಎರಡೂವರೆ ವರ್ಷಗಳಿಗೆ ಅಧಿಕ ಮಾಸವು ಬರುವುದು. ಭೀಷ್ಮ ಪಿತಾಮಹ ತಿಳಿಸಿಕೊಟ್ಟ ಆ ದಿನಗಳಂದು ಹಿರಿಯರನ್ನು ಗೌರವಿಸುವ ಸಂಪ್ರದಾಯ ಬೆಳೆದು ಬಂದಿದೆ ಎಂದರು.
ವೇ.ಮೂ. ತಾಪಸ ಇವರ ವೇದ ಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಂಕರ ಮಾಮಲೇದೇಶಪಾಂಡೆ ಸ್ವಾಗತಿಸಿದರು, ಡಾ. ಭಾಸ್ಕರ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಆರ್.ಜಿ. ಕವಠೇಕರ ಕಾರ್ಯಕ್ರಮ ನಿರೂಪಿಸಿದರು.
ಸಂಜೀವ ಜೋಶಿ, ನರಸಿಂಹ ಕೊತವಾಲ, ರಾಮಮೂತಿರ್ ನಾಡಿಗೇರ, ಆರ್.ಟಿ. ಜೋಗಳೆಕರ, ಎಸ್.ಡಿ. ಕುಲಕಣಿರ್, ಡಾ. ಪ್ರದಿಪ ಅಗ್ನಿಹೋತ್ರಿ, ದತ್ತಮೂತಿರ್ ಕುಲಕಣಿರ್ ಪಾಲ್ಗೊಂಡಿದ್ದರು.