ದೇವಾಲಯ ಪುಣ್ಯ ಸಂಪಾದನೆಯ ಕೇಂದ್ರ : ವಸಂತ ಪೈ ಬದಿಯಡ್ಕ ಅನಿಸಿಕೆ

New Project (16)
Published on

ವಿಜಯವಾಣಿ ಸುದ್ದಿಜಾಲ ಬದಿಯಡ್ಕ

ಪುಣ್ಯವೆಂಬ ಇಂಧನವನ್ನು ತುಂಬಿಸಿಕೊಳ್ಳಬೇಕಾದರೆ ದೇವರ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ದೇವಾಲಯಗಳು ಪಾಪ ನಿವಾರಣೆ, ಸತ್ಕರ್ಮದ ಜಾಗೃತಿ, ಕರ್ತವ್ಯ ನಿರತೆಯನ್ನು ಎಚ್ಚರಿಸುವ ಕೇಂದ್ರಗಳಾಗಿವೆ. ಅಂತಹ ದೇವಸ್ಥಾನಗಳು ಸದಾ ಬೆಳಗಿದಾಗ ನಮ್ಮ ಬದುಕೂ ಬೆಳಕಾಗಬಲ್ಲುದು. ಪ್ರತಿದಿನ ದೇವಾಲಯದ ಬ್ರಹ್ಮಕಲಶೋತ್ಸವವನ್ನು ಕಣ್ಣಮುಂದೆ ಕಾಣುತ್ತಾ ನಮ್ಮ ಕರ್ತವ್ಯ ಪಾಲಿಸೋಣ ಎಂದು ಉದ್ಯಮಿ ಬಿ. ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಏತಡ್ಕ ಡಾ.ಸುಬ್ರಾಯ ಭಟ್, ಉಪಗೌರವಾಧ್ಯಕ್ಷ ವೈ.ಶಂಕರ ಭಟ್ ವಿಟ್ಲ, ಕುಂಬ್ಳೆ ಫಿರ್ಕಾ ಬಂಟರ ಸಂಘದ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಜತೆಕಾರ್ಯದರ್ಶಿ ಬಾಲಕೃಷ್ಣ ಕೆ.ಕೆ. ಕುಂಡಾಪು ಉಪಸ್ಥಿತರಿದ್ದರು.

ಶಶಿಪ್ರಭಾ ವರುಂಬುಡಿ, ಸುಧಾ ಮಾಣಿತ್ತೋಡಿ, ಡಾ.ಅನ್ನಪೂರ್ಣೇಶ್ವರಿ ಏತಡ್ಕ ಶಿವಾರ್ಪಣಂ ಎನ್ನುವ ಬ್ರಹ್ಮಕಲಶೋತ್ಸವದ ಆಶಯ ಗೀತೆಯನ್ನು ಹಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಖಜಾಂಚಿ ವೈ.ವಿ.ಸುಬ್ರಹ್ಮಣ್ಯ ಸ್ವಾಗತಿಸಿ, ಪಶುವೈದ್ಯ ಡಾ.ವೈ.ವಿ.ಕೃಷ್ಣಮೂರ್ತಿ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಚಂದ್ರಶೇಖರ ಏತಡ್ಕ ನಿರೂಪಿಸಿದರು. ಕೇರಳ ಮರಾಠಿ ಸಂರಕ್ಷಣಾ ಸಮಿತಿಯ ಕುಂಬ್ಡಾಜೆ ಪ್ರಾದೇಶಿಕ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಏತಡ್ಕ, ಪೆರ್ಲ ವಲಯದ ಧರ್ಮಸ್ಥಳ ಸ್ವಸಹಾಯ ಸಂಘಗಳು, ಶ್ರೀ ಮಾತಾ ಹವ್ಯಕ ಭಜನಾ ಸಂಘ, ಬದಿಯಡ್ಕ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಶಿವಾರ್ಪಣಂ ಶ್ರಮದಾನ ಸೇವೆ ನಡೆಯಿತು. ಊರ-ಪರವೂರ ಭಗವದ್ಭಕ್ತರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net