ಶ್ರೀ ಕ್ಷೇತ್ರ ನಡ್ಯೋಡಿಯಲ್ಲಿ ಬ್ರಹ್ಮಕಲಶೋತ್ಸವ

New Project (23)
Published on

ಮೂಡುಬಿದಿರೆ: ಮಾರ್ಪಾಡಿ ಕಲ್ಲಬೆಟ್ಟು ನಡ್ಯೋಡಿ ಶ್ರೀ ನಾಗಬ್ರಹ್ಮ, ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ, ಶ್ರೀ ಬೈದರ್ಕಳ ಹಾಗೂ ಮಾಯಂದಲೆ ದೇವಿಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಶುಕ್ರವಾರ ನೆರವೇರಿತು.

ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಪೌರೋಹಿತ್ಯದಲ್ಲಿ ಶುಕ್ರವಾರ ಶ್ರೀ ಮಾಯಂದಲೆ ದೇವಿಯ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಿತು. ಸಂಜೆ ದೈವದ ಗಗ್ಗರ ಸೇವೆ, ನೂತನ ರಾಜಗೋಪುರ ಲೋಕಾರ್ಪಣೆ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ಕುವಾರ್ ಶೆಟ್ಟಿ, ಗೌರವಾಧ್ಯಕ್ಷರಾದ ಎಂ.ಪುರುಷೋತ್ತಮ ಶೆಟ್ಟಿ, ಯುವರಾಜ್ ಜೈನ್, ಐತಪ್ಪ ಆಳ್ವ, ಉದಯ ಕುವಾರ್ ಜೈನ್, ದಾಸಣ್ಣ ಶೆಟ್ಟಿ, ಚಿನ್ನಯ ಕೋಟ್ಯಾನ್, ಆನಂದ ಕುವಾರ್, ಉಪಾಧ್ಯಕ್ಷರಾದ ಸುರೇಶ್ ಕೋಟ್ಯಾನ್, ವಿಶ್ವನಾಥ ಕೋಟ್ಯಾನ್, ದಿನೇಶ್ ಶೆಟ್ಟಿ, ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ಕೋಶಾಧಿಕಾರಿ ಸುಧೀಶ್ ಹೆಗ್ಡೆ ಸಹಿತ ಪದಾಧಿಕಾರಿಗಳು, ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ರೈ, ಕಾರ್ಯದರ್ಶಿ ಯತೀಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಶೈಲೇಶ್ ಶೆಟ್ಟಿ, ಪದಾಧಿಕಾರಿಗಳು, ಗುತ್ತು, ಬರ್ಕೆ ಹಾಗೂ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net