20 ರಿಂದ ಬ್ರಹ್ಮಕಲಶೋತ್ಸವ

16-npk-3
Published on
  • ಕೊಡಗು : ಶ್ರೀ ನಾಡು ಕಡಪಾಲಪ್ಪ ದೇವಾಲಯದಲ್ಲಿ ಮರು ಪ್ರತಿಷ್ಠಾಪನಾ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಏ.20 ರಿಂದ 25ರ ವರೆಗೆ ನಡೆಯಲಿದೆ. ಬೇಂಗೂರು ಗ್ರಾಮದ ಶ್ರೀದೇವರ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಸಪರಿವಾರ ಸಹಿತ ಕಡಪಾಲಪ್ಪ ದೇವರ ಮರು ಪ್ರತಿಷ್ಠಾಪನ ಬ್ರಹ್ಮ ಕಳಶೋತ್ಸವ ನಡೆಯಲಿದೆ.
  • 20 ರಂದು ಬೆಳಗ್ಗೆ ದ್ವಾದಶ ನಾಳಿಕೇರ ಗಣಯಾಗ, ನವಗ್ರಹ ಯಾಗ, ರಕ್ಷಾ ಕಲಶ ಪ್ರತಿಷ್ಠಾಪನೆ ನಡೆಯಲಿದೆ. 21 ರಂದು ಬಿಂಬಶುದ್ಧಿ ಪ್ರಾಯಶ್ಚಿತ ಹೋಮಗಳು ನಡೆಯಲಿವೆ. ಆ ದಿನ ಸಂಜೆ ಕೊಳಲು ವಾದನ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
  • 22 ರಂದು ನಾಡು ಕಡಪಲಪ್ಪ ದೇವರ ಮರು ಪ್ರತಿಷ್ಠಾಪನೆ, ಜೀವ ಕುಂಭಾಭಿಷೇಕ, ಮಹಾಗಣಪತಿ ದೇವರ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಭಿಜ್ಞಾ ಅವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಲಿದೆ. 23 ರಂದು ಶಾಂತಿ ಪೂಜೆ, ಪ್ರಾಯಶ್ಚಿತ ಹೋಮ, ಆಶ್ಲೇಷಬಲಿ ನಡೆಯಲಿದೆ. 24 ರಂದು ತತ್ವ ಹೋಮ, ಬ್ರಹ್ಮ ಕಲಶ, ಮಂಡಲ ಪೂಜೆ ನಡೆಯಲಿದೆ. 25 ರಂದು ಕಡಪಾಲಪ್ಪ ದೇವರಿಗೆ ಶಾಂತಿ ಪ್ರಾಯಶ್ಚಿತ ಹೋಮಗಳು, ತತ್ವ ಕಲಶಾ ಅಭಿಷೇಕ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net