ಬ್ರಹ್ಮಕಲಶೋತ್ಸವ ಸಮಾಲೋಚನೆ ಸಭೆ

Bel_Brahmakalashotsava
Published on

ಬೆಳ್ತಂಗಡಿ: ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜ.7ರಿಂದ 12ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನೆ ಸಭೆ ಗುರುವಾರ ನಡೆಯಿತು.

ಪ್ರಗತಿಪರ ಕೃಷಿಕರಾದ ಧರ್ಣಪ್ಪ ಗೌಡ ಅಂಡಿಲ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಶೆಟ್ಟಿ ಕೆಂಬರ್ಜೆ ಮಾರ್ಗದರ್ಶನ, ಉದ್ಯಮಿ ಶಿವಶಂಕರ ನಾಯಕ್, ಬ್ರಹ್ಮಕಲಶೋತ್ಸವ ಪ್ರಧಾನ ಸಂಚಾಲಕ ಬಾಲಕೃಷ್ಣ ಪೂಜಾರಿ ಬಜಗುತ್ತು, ಅಧ್ಯಕ್ಷ ಮಹಾಬಲ ಗೌಡ ಸಲಹೆ ಸೂಚನೆ ಮಾಹಿತಿ ಅವಲೋಕನ ಮಾಡಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾದೆ, ಕೋಶಾಧಿಕಾರಿ ಕೇಶವ ಕೊಂಗುಜೆ, ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಗೌಡ, ಅರ್ಚಕ ಅನಂತರಾಮ ಶಬರಾಯ, ಆನುವಂಶಿಕ ಆಡಳಿಯ ಮೊಕ್ತೇಸರ ಕುಕ್ಕಪ್ಪ ಗೌಡ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಆದಪ್ಪ ಗೌಡ, ಆಡಳಿತ ಮಂಡಳಿ ಕಾರ್ಯದರ್ಶಿ ಉಮೇಶ್ ಗೌಡ, ಮಹಿಳಾ ಸಮಿತಿಯ ಜ್ಯೋತಿ ಕುರುಡಂಗೆ, ಆಡಳಿತ ಮಂಡಳಿಯ, ಬ್ರಹ್ಮಕಲಶೋತ್ಸವ ಸಮಿತಿಯ ಎಲ್ಲ ಉಪಸಮಿತಿ ಸಂಚಾಲಕರು, ಸಹಸಂಚಾಲಕರು, ಸರ್ವ ಸದಸ್ಯರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಜತೆಕಾರ್ಯದರ್ಶಿ ಸತೀಶ್ ಬಾಲಂಪಾಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net