

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ದೇವರ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಬುಧವಾರ ನೆರವೇರಿತು.
ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹೋಮ ನಡೆದು ರಕ್ತೇಶ್ವರಿ ದೇವಿ ಬಿಂಬ ಪುನಃ ಪ್ರತಿಷ್ಠಾಪನೆ, ಜೀವ ಕಲಶಾಭಿಷೇಕ, ಪರಿಕಲಶಾಭಿಷೇಕ, ನಾಗದೇವರ, ಪರಿವಾರ ದೈವದ ಪ್ರತಿಷ್ಠಾಪನೆ, ಮಧ್ಯಾಹ್ನ 12ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಿತು.
ಶಾಸಕ ರಾಜೇಶ್ ನಾಕ್, ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ, ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ವಕೀಲೆ ಕಲ್ಪನಾ ಚಂದ್ರಶೇಖರ್, ಪ್ರಧಾನ ಅರ್ಚಕ ಸಿ.ಪ್ರಕಾಶ್ ಸೋಮಯಾಜಿ, ವಿವಿಧ ಸಮಿತಿ ಪ್ರಮುಖರಾದ ಸಂಜೀವ ಪೂಜಾರಿ, ಎನ್.ಶಿವಶಂಕರ್, ಬಿ.ಮೋಹನ್ ಐತಪ್ಪ ಪೂಜಾರಿ, ಅಶ್ವನಿಕುಮಾರ್ ರೈ, ಗೋಪಾಲ ಸುವರ್ಣ, ರಾಮಚಂದ್ರ ನಾಯಕ್, ರಾಜೇಶ್ ಎಲ್.ನಾಯಕ್, ರಮೇಶ್ ಸಾಲ್ಯಾನ್, ಸತೀಶ್ ಕುಮಾರ್, ರಘುನಾಥ ಸೋಮಯಾಜಿ, ಚಂದ್ರಹಾಸ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸತೀಶ್ ಭಂಡಾರಿ, ಉಮೇಶ್ ಕುಮಾರ್ ವೈ, ನಾರಾಯಣ ಹೆಗ್ಡೆ, ವಸಂತ ರಾವ್, ಪ್ರಕಾಶ್ ಕಾರಂತ್, ಹರಿಕೃಷ್ಣ ಬಂಟ್ವಾಳ, ಸುರೇಶ್‌ಕುಮಾರ್, ಸತೀಶ್ ಶೆಟ್ಟಿ, ಸದಾಶಿವ ಕೈಕಂಬ, ಚಿತ್ತರಂಜನ್ ಶೆಟ್ಟಿ, ಆಶಾ ಪಿ.ರೈ, ಕಿಶೋರ್ ಬಿ.ಸಿ.ರೋಡು, ರಾಘವೇಂದ್ರ ಬನ್ನಿಂತ್ತಾಯ, ಪುಷ್ಪರಾಜ ಶೆಟ್ಟಿ, ಜಗದೀಶ್ ಹೊಳ್ಳ, ಸತೀಶ್ ಬಿ., ಲೋಕೇಶ್ ಸುವರ್ಣ ಅಲೆತ್ತೂರು, ಸದಾನಂದ ಶೆಟ್ಟಿ, ಕೃಷ್ಣಪ್ಪ ಬಿ., ಸಂದೀಪ್ ಬಿ.ಸಿ.ರೋಡು, ಸೋಮನಾಥ ಸಾಲ್ಯಾನ್, ಡಾ.ಶಿವಪ್ರಸಾದ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.