ಬ್ರಹ್ಮಕಲಶ ಪೂರ್ವಭಾವಿ ಸಭೆ

Bel_Bramakalasha
Published on

ಬೆಳ್ತಂಗಡಿ: ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಪರೀಕದಲ್ಲಿ ಮಾ.6ರಂದು ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾರ್ಶಿವಾದಗಳೊಂದಿಗೆ, ಡಿ.ಹರ್ಷೇಂದ್ರ ಕುಮಾರ್ ನೇತೃತ್ವದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ನಡೆಯಿತು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಡಿ.ಹರ್ಷೇಂದ್ರ ಕುಮಾರ್ ಮಾತನಾಡಿದರು. ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ, ಪರೀಕ ಮಹಾಲಿಂಗೇಶ್ವರ ದೇವಸ್ಥಾನದ ಹೃಷಿಕೇಶ್ ಹೆಗ್ಡೆ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸತ್ಯಾನಂದ ನಾಯಕ್, ಹಿರೇಬೆಟ್ಟು ಬಿಲ್ಲವ ಸಂಘದ ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಮೊಗವೀರ ಸಭಾ ಬೆಳ್ಳಂಪಳ್ಳಿ ಅಧ್ಯಕ್ಷ ಬಾಲು ಕೋಟ್ಯಾನ್, ಪಂಚಾಯಿತಿ ವಾರ್ಡ್ ಸದಸ್ಯರಾದ ಇಸ್ಮಾಯಿಲ್, ನಂದಕುಮಾರ್ ಉಡುಪಿ, ಗಣೇಶ್ ರಾವ್ ಉಡುಪಿ, ಮಹಾವೀರ ಅಜ್ರಿ ಧರ್ಮಸ್ಥಳ, ದುಗ್ಗೇಗೌಡ ಉಡುಪಿ, ಶಾಂತಿವನ ಟ್ರಸ್ಟ್ ಧರ್ಮಸ್ಥಳ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಪರೀಕ ಸೌಖ್ಯವನ ಮುಖ್ಯವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

ಶ್ರೀನಿವಾಸ ಮತ್ತು ಪರಿವಾರ ದೇವರುಗಳಿಗೆ ಪೂಜೆ ಮಾಡಿ ಬ್ರಹ್ಮಕಲಶೋತ್ಸವದ ಎಲ್ಲ ಕಾರ್ಯಕ್ರಮ ಯಶಸ್ವಿಯಾಗಿ ಜರಗುವಂತೆ ಶ್ರೀ ದೇವರ ಆಶೀರ್ವಾದವನ್ನು ಪ್ರಾರ್ಥಿಸಲಾಯಿತು. ಮಾ.3ರಿಂದ 6ರವರೆಗೆ ನಡೆಯುವ ವೈಧಿಕ ಕಾರ್ಯಕ್ರಮದ ನೇತೃತ್ವ ಜಯರಾಮ ತಂತ್ರಿ ಹೆರ್ಗ ವಹಿಸಲಿದ್ದಾರೆ. ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net