

ಶಿರ್ವ: ಪುನಃ ನಿರ್ಮಾಣಗೊಂಡಿರುವ ಬಂಟಕಲ್ಲು ಶ್ರೀ ಬಬ್ಬುಸ್ವಾಮಿ ಸಪರಿವಾರ ದೈವಗಳ ಸಾನ್ನಿಧ್ಯದಲ್ಲಿ ಏ.16ರಿಂದ 19ರವರೆಗೆ ಬಿಂಬ ಪ್ರತಿಷ್ಠಾಪನೆ, ಬ್ರಹ್ಮಕಲಶ, ನೇಮೋತ್ಸವ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪೂರ್ವಭಾವಿ ಸಭೆ ಇತ್ತೀಚೆಗೆ ನಡೆಯಿತು.
ದೈವಸ್ಥಾನ ಗುರಿಕಾರ ಶಂಕರ ಪದಕಣ್ಣಾಯ ಜೀರ್ಣೋದ್ಧಾರ ಕಾರ್ಯ, ಪುನಃ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ಸಿದ್ಧತೆ, ಸಮಿತಿ ಹಾಗೂ ಉಪಸಮಿತಿಗಳ ರಚನೆ ಕುರಿತು ಮಾಹಿತಿ ನೀಡಿದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಸಮಿತಿಗಳ ರಚನೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಡಂಬೈಲು ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ.ಪುಂಡಲೀಕ ಮರಾಠೆ, ನವೀನ್ ಅಮೀನ್, ರಾಮಕೃಷ್ಣ ನಾಯಕ್, ಉಮೇಶ ಪ್ರಭು ಪಾಲಮೆ, ಮಾಧವ ಕಾಮತ್, ಶೇಖರ ಪೂಜಾರಿ, ದೇವದಾಸ ಜೋಗಿ, ವೀರೇಂದ್ರ ಶೆಟ್ಟಿ, ಸದಾನಂದ ಶೆಟ್ಟಿ, ಮಂಜುನಾಥ ಪಾಟ್ಕರ್, ವಿನ್ಸೆಂಟ್ ಪಲ್ಕೆ, ಮಂಜುನಾಥ ಪೂಜಾರಿ, ದಿನೇಶ ದೇವಾಡಿಗ, ರಾಜೇಶ್ ಶೆಟ್ಟಿ , ಹರಿಣಾಕ್ಷಿ ಶೆಟ್ಟಿ, ಎಸ್.ಜೋಸ್ನಾ, ವಿಘ್ನೇಶ್ ಶೆಟ್ಟಿ, ಸುಜಿತ್ ಕುಮಾರ್, ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು. ದಿನೇಶ್ ಎಸ್.ಪ್ರಾರ್ಥಿಸಿದರು. ಎಸ್.ಎಸ್.ಪ್ರಸಾದ್ ನಿರೂಪಿಸಿದರು. ಜೀಣೋದ್ಧಾರ ಸಮಿತಿ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.