ಕ್ಷೇತ್ರ ವೃದ್ಧಿಯಿಂದ ದೇವಾನುಗ್ರಹ : ಹರಿನಾರಾಯಣ ಆಸ್ರಣ್ಣ ಅಭಿಪ್ರಾಯ

New Project (34)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರತೀ 12ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮಕಲಶದಲ್ಲಿ ಯಾಗ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಕ್ಷೇತ್ರ ವೃದ್ಧಿಯಾಗಿ ಭಕ್ತರಿಗೆ ದೇವಾನುಗ್ರಹ ಸಿಗುತ್ತದೆ ಎಂದು ಕಟೀಲು ಶ್ರೀ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಹರಿನಾರಾಯಣ ಆಸ್ರಣ್ಣ ಅಭಿಪ್ರಾಯಪಟ್ಟರು.

ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶತ ಚಂಡಿಕಾಯಾಗ ಸಮಿತಿ ಆಶ್ರಯದಲ್ಲಿ ಡಿ.30ರವರೆಗೆ ನಡೆಯಲಿರುವ ಬ್ರಹ್ಮಕಲಶ ಸಹಿತ ಶತಚಂಡಿಕಾಯಾಗ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಡಿಕ್ಸ್ ಶಿಪ್ಪಿಂಗ್ ಏಜೆನ್ಸಿ ಮಾಲೀಕ ದೇವಾನಂದ ಶೆಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮಹೇಶ್ ಮೋಟಾರ್ಸ್‌ ಮಾಲೀಕ ಜಯರಾಮ ಶೇಖ, ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯಲು, ಸಿಟಿ ಬಸ್ ಮಾಲೀಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಯಶೀಲ ಅಡ್ಯಂತಾಯ, ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಮೋಹನ್ ದಾಸ್ ರೈ ಸಾಂತ್ಯಗುತ್ತು, ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಲಾಂಟ ಸ್ವಾಗತಿಸಿದರು. ಸದಸ್ಯ ನಾರಾಯಣ ಕಜೆ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.

ಶೋಭಾಯಾತ್ರೆ: ಬೀರಿ ಶ್ರೀ ಗಣೇಶ ಮಂದಿರದ ವಠಾರದಿಂದ ಶ್ರೀ ಕ್ಷೇತ್ರದವರೆಗೆ ಬುಧವಾರ ನಡೆದ ಹಸಿರು ಹೊರೆ ಕಾಣಿಕೆ ಬೃಹತ್ ಶೋಭಾಯಾತ್ರೆಗೆ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಚಾಲನೆ ನೀಡಿದರು. ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಐತಾಳ್, ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ, ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ, ಮುಂಡತ್ತಾಯ ದೈವಸ್ಥಾನದ ಗುರಿಕಾರ ಮುತ್ತಣ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಅಡ್ಕ ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ರವಿ ಕಾರ್ನವರು, ಕೋಟೆಕಾರ್ ಶ್ರೀ ಕಾಳಿಕಾಂಬ ದೇವಸ್ಥಾನದ ಅಧ್ಯಕ್ಷ ಸುಂದರ ಆಚಾರ್ಯ, ಕೋಟೆಕಾರ್ ಬೀರಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಘು ಉಚ್ಚಿಲ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಮೋಹನ್ ದಾಸ್ ರೈ ಸಾಂತ್ಯಗುತ್ತು, ಶತಚಂಡಿಕಾಯಾಗ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ ಮೊದಲಾದವರು ಉಪಸ್ಥಿತರಿದ್ದರು.

ನಾವು ನೀಡುವ ದಾನ, ಮಾಡುವ ಹೋಮ ತಕ್ಷಣಕ್ಕೆ ಫಲ ಕೊಡದಿದ್ದರೂ ಜೀವನಾಂತ್ಯದ ಬಳಿಕ ನಮ್ಮೊಂದಿಗೆ ಇರುತ್ತದೆ. ಶತಚಂಡಿಕಾ ಯಾಗದ 700 ಮಂತ್ರಗಳನ್ನು ಕೇಳಿದವರಿಗೆ ದೇವರಲ್ಲಿ ಪ್ರೀತಿ ಹೆಚ್ಚುವ ಜತೆಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಹರಿನಾರಾಯಣ ಆಸ್ರಣ್ಣ, ಕಟೀಲು ಶ್ರೀ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಹೊರೆಕಾಣಿಕೆ ಮೆರವಣಿಗೆಯು ಬ್ರಹ್ಮಕಲಶ ಯಶಸ್ಸಿನ ಸಂಕೇತ. ಹತ್ತು ಕಿಮೀ ವರೆಗೆ ನಡೆದ ಮೆರವಣಿಗೆಯಲ್ಲಿ ಭಕ್ತರಿಗೆ ದುರ್ಗಾಪರಮೇಶ್ವರಿ ತಾಯಿ ಮೇಲಿರುವ ನಂಬಿಕೆಯೇ ಸಾಕ್ಷಿ. ಶ್ರದ್ಧೆ ಭಕ್ತಿಯಿಂದ ತಾಯಿಗೆ ಪ್ರಾರ್ಥನೆ ಸಲ್ಲಿಸಿದರೆ ಬಯಸಿದ ಕೆಲಸಗಳು ಯಶಸ್ವಿಯಾಗಿ ನಡೆಯುವುದು. ಸಂತೋಷ್ ಕುಮಾರ್ ರೈ ಬೋಳಿಯಾರ್, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ https://www.vijayavani.net/bekal-agro-carnival https://www.vijayavani.net/bill-for-unused-water

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net