

ನರೇಗಲ್ಲ: ನಾಡಿನ ಜನತೆಗೆ ರಾಮನಾಮ ಜಪದ ರುಚಿ ಹತ್ತಿಸಿದವರು ಸದ್ಗುರು ಶ್ರೀ ಬ್ರಹ್ಮಚೈತನ್ಯರು. ಕೇವಲ ಜಪದ ಮೂಲಕವೇ ಮೋಕ್ಷ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಗೋಂದಾವಲೇಕರ ಮಹಾರಾಜರು ಎಂದು ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.
ದತ್ತ ಉತ್ಸವದ ನಿಮಿತ್ತ ಸ್ಥಳೀಯ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದ್ಗುರು ಶ್ರೀ ಬ್ರಹ್ಮಚೈತನ್ಯರ ತೊಟ್ಟಿಲೋತ್ಸವದಲ್ಲಿ ಅವರು ಮಾತನಾಡಿದರು. ರಾಮನ ನಾಮ ಜಪಿಸಿದರೆ ವ್ಯಕ್ತಿ ತನ್ನಲ್ಲಿರುವ ಕೆಟ್ಟ ಹಾಗೂ ವಿನಾಶಕಾರಿ ಶಕ್ತಿಯಿಂದ ಮುಕ್ತನಾಗಿ, ತನ್ನಲ್ಲಿ ರಚನಾತ್ಮಕ ಶಕ್ತಿಯ ಹರಿವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಿದರು.
ಬೆಳಗ್ಗೆ ಶ್ರೀ ದತ್ತಾತ್ರೇಯನಿಗೆ ಕಾಕಡಾರತಿ ಸೇವೆ ನಂತರ ಸುಮಂಗಲೆಯರು ಶ್ರೀ ಗುರುಗಳ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ಜೋಗುಳ ಹಾಡಿದರು. ಶ್ರೀ ಗುರುಚರಿತ್ರೆ ಪಾರಾಯಣ ಕರ್ತ ವಿಶ್ವನಾಥಭಟ್ಟ ವೈದ್ಯ, ಶ್ರೀ ದತ್ತ ಭಕ್ತ ಮಂಡಳಿ ಅಧ್ಯಕ್ಷ ಸಂಜೀವಕುಮಾರ ಕುಲಕರ್ಣಿ, ಅರುಣ ಕುಲಕರ್ಣಿ(ಕುರಗಡ್ಡಿ), ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಅನಿಲಕುಮಾರ, ಆನಂದ ಕುಲಕರ್ಣಿ, ಅಭಿಷೇಕ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ಆದರ್ಶ ಕುಲಕರ್ಣಿ, ರಾಜಶ್ರೀ ಕುಲಕರ್ಣಿ, ಲಕ್ಷ್ಮೀ ಗ್ರಾಮಪುರೋಹಿತ ಇತರರಿದ್ದರು.