

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಜೀರ್ಣೋದ್ಧಾರಗೊಂಡ ಸಾಂತೂರು ಶ್ರೀ ಆಲ್ ಉರಿನಾಗಬ್ರಹ್ಮಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಗರ್ಭಗೃಹದಲ್ಲಿ ಬ್ರಹ್ಮ, ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಸಾನ್ನಿಧ್ಯಗಳಲ್ಲಿ ಸೋಮವಾರ ಬ್ರಹ್ಮಕಲಶಾಭಿಷೇಕ ವಿಜೃಂಭಣೆಯಿಂದ ನಡೆಯಿತು.
ಪ್ರಧಾನ ಅರ್ಚಕ ಸಾಂತೂರು ರಘುಪತಿ ಜೋಯಿಸ ಹಾಗೂ ಅನಂತ ಜೋಯಿಸರ ನೇತೃತ್ವದಲ್ಲಿ ಬ್ರಹ್ಮದೇವರಿಗೆ 108 ಕಲಶ ಸಹಿತ ಬ್ರಹ್ಮಕಲಷಾಭಿಷೇಕ, ಅಧಿವಾಸ ಹೋಮ, ನಾಗನಿಗೆ 25 ಕಲಶಾಧಿವಾಸ, ಅಧಿವಾಸ ಹೋಮ ಹಾಗೂ ರಕ್ತೇಶ್ವರಿ ನಂದಿಗೋಣ, ಕ್ಷೇತ್ರಪಾಲ ಸಾನ್ನಿಧ್ಯದಲ್ಲಿ ನವಕ ಕಲಶಾಧಿವಾಸ, ಅಧಿವಾಸ ಹೋಮ, ಪರಿಕಲಶಪೂರ್ವಕ ಬ್ರಹ್ಮಕುಂಭಾಭಿಷೇಕ, ಆಶ್ಲೇಷಬಲಿ, ಕಲ್ಪೋಕ್ತ ಪೂಜಾ ಪೂರ್ವಕ ಮಹಾಪೂಜೆ, ವಟು ಆರಾಧನೆ, ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ಸಂಪನ್ನಗೊಂಡಿತು.
ಜೀರ್ಣೋದ್ಧಾರ ಕಾರ್ಯಗಳಿಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಉರಿನಾಗಬ್ರಹ್ಮಸ್ಥಾನ ಸನ್ನಿಧಾನದಲ್ಲಿ ಸಾರ್ವಜನಿಕ ಹೂವಿನ ಪೂಜೆ ನೆರವೇರಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ದಿವಾಕರ ಎಂ.ಶೆಟ್ಟಿ, ಸುನೀಲ್ ಜಯರಾಮ್ ಶೆಟ್ಟಿ, ಅಧ್ಯಕ್ಷ ಅಂಗಡಿಗುತ್ತು ಪ್ರಸಾದ್ ಎಂ.ಶೆಟ್ಟಿ, ಉಪಾಧ್ಯಕ್ಷ ಶಶಿಕುಮಾರ್ ಬಿ.ಶೆಟ್ಟಿ, ಕಾರ್ಯದರ್ಶಿ ಸುಜಿತ್ ಕೆ.ಶೆಟ್ಟಿ, ಕೋಶಾಧಿಕಾರಿ ಹರಿಣಾಕ್ಷ ಶೆಟ್ಟಿ, ರವೀಂದ್ರ ಪ್ರಭು ಸಾಂತೂರು, ವಿಶ್ವನಾಥ ಶೆಟ್ಟಿ, ಗಣೇಶ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಶಿಲ್ಪಾ ಜಿ.ಸುವರ್ಣ, ಪ್ರಸಾದ್ ಶೆಟ್ಟಿ ಕುತ್ಯಾರು, ಸುನೀಲ್ರಾಜ್ ಶೆಟ್ಟಿ, ದಯಾನಂದ ಹೆಗ್ಡೆ, ಗುರುಪ್ರಸಾದ್ ಸಿ.ಶೆಟ್ಟಿ, ಪ್ರವೀಣ್ ವಾಸು ಶೆಟ್ಟಿ, ಸೋಮನಾಥ ಜೆ.ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಿಲಾರು, ಹೇಮರಾಜ ಅಡಪ, ಶೇಖರ ಡಿ.ಶೆಟ್ಟಿ, ಶರತ್ ಶೆಟ್ಟಿ ಸಾಂತೂರು, ದಿನೇಶ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಅಡ್ವೆ ಮೂಡ್ರಗುತ್ತು, ಕೃಷ್ಣ ಕುಮಾರ್ ಶೆಟ್ಟಿ, ಸತೀಶ್ ಶೆಟ್ಟಿ, ಗೋಕುಲದಾಸ್ ಶೆಟ್ಟಿ, ಸತೀಶ್ ಲೋಕು ಶೆಟ್ಟಿ ಡೊಂಬಿವಲಿ, ಗಂಗಾಧರ ಶೆಟ್ಟಿ, ರವಿ ಶೆಟ್ಟಿ, ಸುನೀಲ್ರಾಜ್ ಶೆಟ್ಟಿ, ನಿತಿನ್ ಶೆಟ್ಟಿ, ರಾಜೇಂದ್ರ ಶೆಟ್ಟಿ, ಅಶೋಕ್ ಎಸ್.ಶೆಟ್ಟಿ, ಕರುಣಾಕರ ಪೂಜಾರಿ, ಸುರೇಶ್ ಬಿ. ಸುವರ್ಣ ಪಿಲಾರು ಪರಾರಿ, ಸಾಂತೂರು ಪರಾರಿ, ಪಿಲಾರು ಮಜಲಬೆಟ್ಟುಬೀಡು, ಪಿಲಾರು ತಂಬಿದಬೆಟ್ಟು, ಪಿಲಾರು ಕಂಕಣಗುತ್ತು, ಸಾಂತೂರು ಕುಂದಬೆಟ್ಟುಗುತ್ತು, ಸಾಂತೂರು ಸಾಮಾನಾಡಿಗುತ್ತು ಮನೆತನದ ಪ್ರಮುಖರು, ಸಾಂತೂರು ಪಿಲಾರು ಗ್ರಾಮಸ್ಥರು ಉಪಸ್ಥಿತರಿದ್ದರು.