ಬಿಳಿಗಿರಿರಂಗನ ಚಿಕ್ಕ ಜಾತ್ರೆ

16 yelandur 01.b
Published on

ಯಳಂದೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿ ಮಂಗಳವಾರ ನಡೆದ ಚಿಕ್ಕ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು, ಜಾತ್ರೆಗೆ ವಿವಿಧ ರಾಜ್ಯ, ಜಿಲ್ಲೆ ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಂಗನ ತೇರನ್ನು ಎಳೆದು ಧನ್ಯತೆ ಮೆರೆದರು.
ಎಲ್ಲೆಲ್ಲೂ ಗೋವಿಂದ ನಾಮಾವಳಿ:ಮುಂಜಾನೆ ಕಲ್ಯಾಣೋತ್ಸವ, ಮುಯ್ಯಿ ಸಮರ್ಪಣೆ ನಂತರ ಪವಿತ್ರ ಚಿನ್ನಾಭರಣವನ್ನು ಸ್ವಾಮಿಗೆ ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕೃತವಾದ ಉತ್ಸವಮೂರ್ತಿಯನ್ನು ಬಣ್ಣ, ಬಣ್ಣದ ಪಟಗಳು, ಪುಷ್ಪದಿಂದ ಅಲಂಕೃತವಾದ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ನೆರೆದಿದ್ದ ಭಕ್ತರು ಶಂಖ, ಜಾಗಟೆ, ನಾದಸ್ವರದೊಂದಿಗೆ ಗೋವಿಂದ ನಾಮಾವಳಿಯನ್ನು ಮೊಳಗಿಸಿದರು.ನಂತರ ತೇರು ಎಳೆದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net