ಬಿಳಿಗಿರಿ ರಂಗನಾಥಸ್ವಾಮಿ ಚಿಕ್ಕ ಜಾತ್ರೆ ಇಂದು

Oplus_131072
Oplus_131072
Published on

ಯಳಂದೂರು : ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಕ್ರಾಂತಿ ಪ್ರಯುಕ್ತ ನಡೆಯುವ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ರಥೋತ್ಸವ(ಚಿಕ್ಕ ಜಾತ್ರೆ) ಜ.15ರಂದು ನೆರವೇರಲಿದೆ. ದಕ್ಷಿಣ ತಿರುಪತಿ ಎಂದೇ ಖ್ಯಾತವಾಗಿರುವ ಕ್ಷೇತ್ರದಲ್ಲಿ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಮರುದಿನ ನಡೆಯುವ ಜಾತ್ರೆಗೆ ತನ್ನದೇ ಆದ ಇತಿಹಾಸವಿದೆ. ಬುಧವಾರ ಮಧ್ಯಾಹ್ನ 11. 55 ರಿಂದ 12. 06 ರೊಳಗೆ ಸಲ್ಲುವ ಶುಭ ಮೀನ ಲಗ್ನದ ಮುಹೂರ್ತದಲ್ಲಿ ರಥೋತ್ಸವ ಸಂಪನ್ನಗೊಳ್ಳಲಿದೆ. ಇದಕ್ಕಾಗಿ ಸಿದ್ಧತೆ ಪೂರ್ಣಗೊಂಡಿದೆ. ದೇವರಿಗೆ ಅಲಂಕರಿಸುವ ಚಿನ್ನಾಭರಣವಿರುವ ಪೆಟ್ಟಿಗೆಗಳನ್ನು ಮಂಗಳವಾರ ಪಟ್ಟಣದ ಉಪ ಖಜಾನೆಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇಗುಲಕ್ಕೆ ತರಲಾಯಿತು. ಜಾತ್ರೆಗಾಗಿ ಬೆಟ್ಟಕ್ಕೆ ಹೋಗುವ ಭಕ್ತರಿಗೆ ಬುಧವಾರ ಸಾರಿಗೆ ಸಂಸ್ಥೆ 80ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಿದೆ. ಸುಗಮ ಸಂಚಾರಕ್ಕೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಟ್ಯಾಂಕರ್, ತಾತ್ಕಾಲಿಕವಾಗಿ ಶೌಚಗೃಹಗಳನ್ನು ಇರಿಸಲಾಗಿದೆ ಎಂದು ದೇಗುಲದ ಇಒ ಮೋಹನಕುಮಾರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net