ಬಿಪಿಟಿ, ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ಆರಂಭ

08M.D.R.1
ಐಶ್ವರ್ಯ ವಿದ್ಯಾಸಂಸ್ಥೆಯ ಹೊರ ನೋಟ
Published on

ಮದ್ದೂರು: ನಗರದ ಐಶ್ವರ್ಯ ವಿದ್ಯಾಸಂಸ್ಥೆಯಲ್ಲಿ ಹೊಸದಾಗಿ ಬಿಪಿಟಿ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳ ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ವಿಂದ್ಯಾ ಬೋಪಣ್ಣ ತಿಳಿಸಿದರು.

2025-26ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಬ್ಯಾಚುಲರ್ ಆಫ್ ಫಿಜಿಯೋಥೆರಪಿ (ಬಿಪಿಟಿ), ಅಲೈಡ್ ಹೆಲ್ತ್ ಸೈನ್ಸ್ (ಬಿ.ಎಸ್ಸಿ ಎಎಚ್‌ಎಸ್) ಹಾಗೂ ಪ್ಯಾರಾಮೆಡಿಕಲ್ (ಡಿಪ್ಲೊಮಾ ಇನ್ ಪ್ಯಾರಾಮೆಡಿಕಲ್) ಕೋರ್ಸುಗಳನ್ನು ಆರಂಭಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದರಿ ಕೋರ್ಸ್‌ಗಳಿಗೆ ಸರ್ಕಾರಿ ಆದೇಶ ಸಹ ದೊರೆತಿರುತ್ತದೆ. ಕೋರ್ಸ್‌ಗಳ ತರಗತಿಗಳು ಪ್ರಸ್ತುತ ವರ್ಷ ನವೆಂಬರ್‌ನಿಂದ ಪ್ರಾರಂಭವಾಗಲಿದೆ. ದಾಖಲಾತಿ ಆರಂಭವಾಗಿವೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಐಶ್ವರ್ಯ ಇನ್ಸ್‌ಟಿಟ್ಯೂಟ್ ಆಫ್ ಫಿಜಿಯೋಥೆರಪಿ(ಬಿಪಿಟಿ) 4 ವರ್ಷ 6 ತಿಂಗಳು, ಐಶ್ವರ್ಯ ಇನ್ಸ್‌ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ಸ್(ಬಿ.ಎಸ್ಸಿ ಎಂಎಲ್‌ಟಿ), (ಬಿ.ಎಸ್ಸಿ ಎಂಐಟಿ) ಹಾಗೂ (ಬಿ.ಎಸ್ಸಿ ಎಟಿಓಟಿ) 3 ವರ್ಷ 6 ತಿಂಗಳು, ಐಶ್ವರ್ಯ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್(ಡಿಪ್ಲೊಮಾ ಇನ್ ಪ್ಯಾರಾಮೆಡಿಲ್), 2 ವರ್ಷ 6 ತಿಂಗಳು ಹಾಗೂ 3 ವರ್ಷ 3 ತಿಂಗಳು ಇರುತ್ತದೆ. ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಇದೆ ಎಂದು ತಿಳಿಸಿದರು.

ಸುಸಜ್ಜಿತವಾದ ಕಟ್ಟಡ, ಹೈಟೆಕ್ ಪ್ರಯೋಗಾಲಯ, ನುರಿತ ಉಪನ್ಯಾಸಕರ ಜತೆಗೆ ಉತ್ತಮ ಪರಿಸರದ ಮಧ್ಯೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮುಂದೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐಶ್ವರ್ಯ ವಿದ್ಯಾಸಂಸ್ಥೆ 2012-13ನೇ ಶೈಕ್ಷಣಿಕ ಸಾಲಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಯನ್ನು ಆರಂಭಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಾ 13 ವರ್ಷ ಪೂರ್ಣಗೊಳಿಸಿದೆ. ತದನಂತರ 2016-17 ನೇ ಶೈಕ್ಷಣಿಕ ಸಾಲಿನಲ್ಲಿ ಪಿಯು ಹಾಗೂ 2019-20ನೇ ಶೈಕ್ಷಣಿಕ ಸಾಲಿನಿಂದ ಬಿ.ಎಸ್ಸಿ (ನರ್ಸಿಂಗ್), ಜಿಎನ್‌ಎಂ ಕೋರ್ಸ್‌ಗಳನ್ನು ಪ್ರಾರಂಭಿಸಿರುತ್ತಾರೆ. ಹೊಸದಾಗಿ ಬಿಪಿಟಿ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳ ಪ್ರಾರಂಭಿಸಲಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net