7.76 ಲಕ್ಷ ಅನರ್ಹ ಬಿಪಿಎಲ್​ ಕಾರ್ಡ್​ ರದ್ದತಿಗೆ ಕ್ರಮ

DSC03984
Published on

ಉಡುಪಿ: ರಾಜ್ಯದಲ್ಲಿ 1.28 ಕೋಟಿ ರೇಶನ್​ ಕಾರ್ಡ್​ಗಳಿದ್ದು, 4.53 ಕೋಟಿ ಲಾನುಭವಿಗಳಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರ ಹೊಸ ಸರ್ವೆ ನಡೆಸಿದ್ದು, 7.76 ಲಕ್ಷ ಅನರ್ಹ ಕಾರ್ಡ್​ಗಳನ್ನು ರದ್ದು ಮಾಡುವಂತೆ ಸೂಚನೆ ನೀಡಿದೆ. ಈ ಬಗ್ಗೆ ಅಗತ್ಯಕ್ರಮಕೈಗೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಎಚ್​. ಮುನಿಯಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಒಟ್ಟು ಜನಸಂಖ್ಯೆಯ ಶೇ. 50 ರಿಂದ 55ರಷ್ಟು ಮಾತ್ರ ಬಿಪಿಎಲ್​ ಕಾರ್ಡ್​ಗಳಿವೆ. ಆದರೆ ಪ್ರಗತಿಪರ ರಾಜ್ಯ ಕರ್ನಾಟಕದಲ್ಲಿ ಶೇ.75ರಷ್ಟು ಮಂದಿ ಬಿಪಿಎಲ್​ ಕಾರ್ಡ್​ಗಳಿವೆ. ಇಲಾಖೆ ನಡೆಸಿದ ಸಮೀೆಯಲ್ಲೂ 13 ಲಕ್ಷ ಅನರ್ಹ ಕಾರ್ಡ್​ಗಳು ಪತ್ತೆಯಾಗಿದ್ದವು. ಹೀಗಾಗಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ ಎಂದರು.

ತಹಶೀಲ್ದಾರ್​ಗೆ ಅರ್ಜಿ ಸಲ್ಲಿಸಿ

ನೈಜ ಬಡವರಿಗೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ಅರ್ಹ ಲಾನುಭವಿಗಳ ಕಾರ್ಡ್​ ರದ್ದಾಗಿದ್ದರೆ ಅವರು ತಹಶೀಲ್ದಾರ್​ಗೆ ಅರ್ಜಿ ಸಲ್ಲಿಸಬಹುದು. ಅನ್ನಭಾಗ್ಯ ಯೋಜನೆ ಲಾಭ ಪಡೆಯಬಹುದು. ಅಕ್ಟೋಬರ್​ ತಿಂಗಳಲ್ಲಿ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ ವಹಿಸಲಾಗುವುದು. ಬಿಪಿಎಲ್​ ಕಾರ್ಡ್​ ಹೊಂದಿರುವ ಸ್ಥಿತಿವಂತರು ಸ್ವಯಂಪ್ರೇರಣೆಯಿಂದ ಎಪಿಎಲ್​ಗೆ ವರ್ಗಾಯಿಸಿಕೊಳ್ಳುವಂತೆ ಅವರು ವಿನಂತಿಸಿದ್ದಾರೆ.

ಗೋಡಾನ್​ ಭೇಟಿ ಅಗತ್ಯ

ಜಿಲ್ಲೆಯ ಎಲ್ಲಾ ಆಹಾರ ನಿರೀಕ್ಷಕರು, ಉಪನಿರ್ದೇಶಕರು ಆಹಾರ ದಾಸ್ತಾನು ಮಳಿಗೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ವರದಿ ಸಲ್ಲಿಸಬೇಕು. ಇದರಿಂದ ಹಳೆ ದಾಸ್ತಾನು ಪತ್ತೆ ಹಚ್ಚುವುದು, ಗುಣಮಟ್ಟದ ಪರೀೆ ಗಮನಕ್ಕೆ ಬರಲಿದೆ. ಅಕ್ಕಿ ಅಕ್ರಮ ಸಾಗಾಟ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆಹಾರ ಇಲಾಖೆ ಉಪನಿರ್ದೇಶಕಿ ರಶ್ಮಿ ಎಂ. ತೇಲಿ, ದ.ಕ. ಜಿಲ್ಲಾ ಉಪನಿರ್ದೇಶಕಿ ಅನಿತಾ ಮುಂಡ್ಲೂರು, ಎಡಿಸಿ ಅಬೀದ್​ ಗದ್ಯಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net