ಈಜಲು ತೆರಳಿದ್ದ ಬಾಲಕರು ನೀರುಪಾಲು

Published on

ಬಳ್ಳಾರಿ : ಕೃಷಿಹೊಂಡದಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ಮೃತಪಟ್ಟ ಘಟನೆ ತಾಲೂಕಿನ ಶಿಡಗಿನಮೋಳದಲ್ಲಿ ಗುರುವಾರ ನಡೆದಿದೆ.

ಶಿಡಗಿನ ರಾಜೇಶ(9), ಶಿವಶಂಕರ(10) ಮೃತ ಬಾಲಕರಾಗಿದ್ದಾರೆ. ಗ್ರಾಮದಲ್ಲಿ ಕ್ರಿಕೆಟ್ ಆಟವಾಡಲು ತೆರಳಿದ್ದ ಬಾಲಕರು ಕ್ರಿಕೆಟ್ ಬಳಿಕ ಶ್ರೀನಿವಾಸರೆಡ್ಡಿ ಎಂಬುವರರ ಜಮೀನಿನಲ್ಲಿ ತೋಡಿದ್ದ ಕೃಷಿಹೊಂಡದಲ್ಲಿ ಈಜಲು ತೆರಳಿದ್ದರು. ಆದರೆ, ಕೃಷಿ ಹೊಂಡಾ ಆಳವಾಗಿದ್ದರಿಂದ ಹೊರ ಬರಲಾಗದೇ ಮೃತಪಟ್ಟಿದ್ದಾರೆ. ಪೊಲೀಸ್, ಅಗ್ನಿಶಾಮಕ ದಳದ ಅಧಿಕಾರಿಗಳ ಸಹಾಯದಿಂದ ಶವ ಹೊರ ತೆಗೆಯಲಾಗಿದೆ. ಈ ಕುರಿತು ಪಿಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net