ಕೃಷಿ ಹೊಂಡಕ್ಕೆ ಬಿದ್ದ ಬಾಲಕರು ಸಾವು

Published on

ಬಳ್ಳಾರಿ : ತಾಲೂಕಿನ ಮೈಲಾಪುರ ಗ್ರಾಮದಲ್ಲಿನ ಕೃಷಿ ಹೊಂಡಕ್ಕೆ ಇಬ್ಬರು ಮಕ್ಕಳು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ಬಲಕುಂದಿ ಗ್ರಾಮದ ನಿವಾಸಿ ಮೂಕಣ್ಣನ ಮಕ್ಕಳಾದ ಮಹಾಂಕಾಳಿ (12 ), ಶಿವರಾಜ (09) ಮೃತರು. ದಸರಾ ರಜೆ ಹಿನ್ನೆಲೆ ಸಮೀಪದ ಮೈಲಾಪುರ ಗ್ರಾಮದಲ್ಲಿ ಕೃಷಿ ಚಟುವಟಿಕೆಗಾಗಿ ಪಾಲಕರೊಂದಿಗೆ ಮಕ್ಕಳು ತೆರಳಿದ್ದರು. ಪಾಲಕರಿಗೆ ನೀರು ತರಲೆಂದು ಹೊಂಡಕ್ಕೆ ತೆರಳಿದ ವೇಳೆ ಕಾಲು ಜಾರಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಉಪತಹಸೀಲ್ದಾರ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net