ಬಿ.ಕಣಬೂರು ಗ್ರಾಮ ಪಂಚಾಯಿತಿಗೆ 83 ನಾಮಪತ್ರ

web 2
Published on

ಬಾಳೆಹೊನ್ನೂರು: ಹುಲಿ ಯೋಜನೆ, ಪರಿಸರ ಸೂಕ್ಷ್ಮ ವಲಯ ಯೋಜನೆ ಜಾರಿ ಖಂಡಿಸಿ ಬಾಳೆಹೊನ್ನೂರು ಹೋಬಳಿಯಲ್ಲಿ ಸರ್ವ ಪಕ್ಷಗಳು ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ ಬಿ.ಕಣಬೂರು ಹಾಗೂ ಕರ್ಕೆಶ್ವರ ಗ್ರಾಪಂನಲ್ಲಿ ಎಲ್ಲ ಸ್ಥಾನಗಳಿಗೆ ಕಡೇ ದಿನ ನಾಮಪತ್ರ ಸಲ್ಲಿಕೆಯಾಗುವ ಮೂಲಕ ಎರಡು ಗ್ರಾಪಂಗಳಲ್ಲಿ ಚುನಾವಣೆ ಬಹಿಷ್ಕಾರ ವಿಫಲವಾಗಿದೆ.

ಬಿ.ಕಣಬೂರು ಗ್ರಾಪಂಗೆ ಗುರುವಾರ ಪಕ್ಷ ಬೆಂಬಲವಲ್ಲದ ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಶುಕ್ರವಾರ ಉಳಿದ ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಬಾರದು ಎಂದು ಸರ್ವಪಕ್ಷಗಳ ಮುಖಂಡರು ತೀರ್ವನಿಸಿ ನಾಮಪತ್ರ ಸಲ್ಲಿಸಲು ಬರುವವರನ್ನು ಮನವೊಲಿಸಲು ಗ್ರಾಪಂ ಸಮೀಪದಲ್ಲಿ ತಂಡ ನಿಲ್ಲಲಾಗಿತ್ತು. ಆದರೆ ಪಕ್ಷ ಬೆಂಬಲಿತವಲ್ಲದ 10ಕ್ಕೂ ಅಧಿಕ ಅಭ್ಯರ್ಥಿಗಳು ಸರ್ವಪಕ್ಷಗಳ ಮುಖಂಡರ ಮನವಿ ಪುರಸ್ಕರಿಸದೆ ದಿಢೀರ್ ನಾಮಪತ್ರ ಸಲ್ಲಿಸಿದರು. ಇದರಿಂದ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಕೆಲ ಸಮಯ ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ನಾಮಪತ್ರ ಸಲ್ಲಿಸಲು ಗ್ರಾಪಂ ಕಚೇರಿಗೆ ತೆರಳಿದರು. ಇದರಿಂದ ಗ್ರಾಪಂ ಆವರಣದಲ್ಲಿ ಗೊಂದಲದ ವಾತಾವರಣ ನಿರ್ವಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net