ಗ್ರಾಪಂ ಸದಸ್ಯರ ಮನವೊಲಿಕೆ ವಿಫಲ

Kids-boycotting-classes-as-parents-mark-virtual-bandh-1601455112
Published on

ವಿಜಯವಾಣಿ ಸುದ್ದಿಜಾಲ ಆರ್ಡಿ

ಮಡಾಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯರು ಘೋಷಿಸಿರುವ ವಿಧಾನಪರಿಷತ್ ಚುನಾವಣೆ ಬಹಿಷ್ಕಾರಿಸಿದ ಹಿನ್ನೆಲೆಯಲ್ಲಿ ಹೆಬ್ರಿ ತಹಸೀಲ್ದಾರ್ ಎಸ್.ಎ ಪ್ರಸಾದ್, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಶಶಿಧರ್ ನೇತೃತ್ವದ ಅಧಿಕಾರಿಗಳ ತಂಡ ಪಂಚಾಯಿತಿಗೆ ಭೇಟಿ ನೀಡಿದ್ದು, ಮನವೊಲಿಸಲು ವಿಫಲ ಯತ್ನ ನಡೆಸಿದೆ.

ಮಡಾಮಕ್ಕಿ ಹಾಗೂ ಶೇಡಿಮನೆ ಗ್ರಾಮಗಳನ್ನು ಬಫರ್ ಝೋನ್‌ನಿಂದ ಶೂನ್ಯಕ್ಕೆ ಇಳಿಸಬೇಕು ಸಹಿತ ವಿವಿಧ ಬೇಡಿಕೆಗಳನ್ನು ಈಗಾಗಲೆ ಪಂಚಾಯಿತಿ ಸದಸ್ಯರು ಮುಂದಿಟ್ಟಿದ್ದು, ಚುನಾವಣಾ ಬಹಿಷ್ಕಾರ ಪತ್ರಕ್ಕೆ ಸಹಿ ಮಾಡಿ ಗ್ರಾಮ ಲೆಕ್ಕಾಧಿಕಾರಿ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ತಲುಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮಡಾಮಕ್ಕಿ ಗ್ರಾಮ ಪಂಚಾಯಿತಿಗೆ ಆಗಮಿಸಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ, ಉಪಾಧ್ಯಕ್ಷೆ ಬೇಬಿ ಹೆಗ್ಡೆ, ಸದಸ್ಯರಾದ ಸುಶೀಲಾ ಪೂಜಾರಿ, ಜಯಲಕ್ಷ್ಮೀ, ಸದಾನಂದ ಪೂಜಾರಿ, ಜ್ಯೋತಿ ಪೂಜಾರ್ತಿ, ದಯಾನಂದ ಪೂಜಾರಿ, ಸುರೇಶ್ ಶೆಟ್ಟಿ, ಪ್ರತಾಪ್ ಶೆಟ್ಟಿ ಎಂ.ಆರ್, ರತಿ ಕುಲಾಲ್, ರಾಧಾ ಹಾಗೂ ಮಡಾಮಕ್ಕಿ-ಶೇಡಿಮನೆ ಗ್ರಾಮದ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಪಂ ಸದಸ್ಯರಿಂದ ಎಚ್ಚರಿಕೆ

ಮಡಾಮಕ್ಕಿ ಹಾಗೂ ಶೇಡಿ ಮನೆ ಗ್ರಾಮಗಳನ್ನು ಕಸ್ತೂರಿರಂಗನ್ ವರದಿಯಿಂದ ಕೈ ಬಿಡಲು ಗ್ರಾಮ ಪಂಚಾಯಿತಿಯ 11 ಸದಸ್ಯರೂ ಪಟ್ಟು ಹಿಡಿದಿದ್ದು, ಇವುಗಳು ಈಡೇರುವವರೆ ಪರಿಷತ್ ಸಹಿತ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಪಂಚಾಯಿತಿ ಸದಸ್ಯರು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net