ಎಮ್ಮೆಯ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ; ನೀರಿನ ಗುಂಡಿಗೆ ಬಿದ್ದು ಮೃತಪಟ್ಟ ಹುಡುಗ

magu
Published on

ವಿಜಯನಗರ: ಎಷ್ಟೋ ಸಲ ಹೀಗಾಗುತ್ತದೆ.. ರಸ್ತೆಯಲ್ಲಿ ಅಡ್ಡ ಬಂದ ಹಸು-ನಾಯಿ-ಹಾವಿನ ಜೀವ ಉಳಿಸಲು ಹೋಗಿ ಅಪಘಾತವಾಗಿ ವಾಹನ ಚಾಲಕರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಹಲವಾರು ಇವೆ. ಇಲ್ಲಿಯೂ ಹೆಚ್ಚು ಕಡಿಮೆ ಅಂಥದ್ದೇ ಒಂದು ಅವಘಡ ಸಂಭವಿಸಿದೆ. ಹುಡುಗನೊಬ್ಬ ಎಮ್ಮೆಯ ಪ್ರಾಣ ಉಳಿಸಲು ಹೋಗಿ ಸ್ವತಃ ಜೀವ ಕಳೆದುಕೊಂಡಿದ್ದಾನೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದ ನಿವಾಸಿ ತಿರುಪತಿ (13) ಸಾವಿಗೀಡಾದ ಹುಡುಗ. ಈತ ಎಮ್ಮೆಯನ್ನು ಮೇಯಲು ಕರೆದುಕೊಂಡು ಹೋದಾಗ ಈ ಅವಘಡ ಸಂಭವಿಸಿದೆ. ಮೇಯುತ್ತ ಮೇಯುತ್ತ ನೀರಿನ ಗುಂಡಿಯತ್ತ ಸಾಗಿದ ಎಮ್ಮೆಯನ್ನು ಅಪಾಯದಿಂದ ಮಾಡಲು ಹೋಗಿ ತಾನೇ ಅಪಾಯಕ್ಕೆ ಸಿಲುಕಿದ್ದಾನೆ. ಆಯತಪ್ಪಿ ತಿರುಪತಿಯೇ ನೀರಿನ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net