ಐನೂರು ವರ್ಷದ ಸೊಸೆಯಂದಿರ ಬಾವಿಯಲ್ಲಿ ಈಜಲು ಹೋಗಿ ಸಾವಿಗೀಡಾದ ಬಾಲಕ!

Feature
ನೀರಲ್ಲಿ ಮುಳುಗಿದ ಬಾಲಕನಿಗಾಗಿ ಕಾರ್ಯಾಚರಣೆ
Published on

ಕೊಪ್ಪಳ: ನೀರಿನಲ್ಲಿ ಈಜಿಗೆ ಹಾಗೂ ಮೋಜಿಗೆ ಮುಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಇದೀಗ ಅಂಥ ಸಾವುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ಪ್ರಕರಣದಲ್ಲಿ ಹದಿನಾಲ್ಕು ವರ್ಷದ ಪೋರನೊಬ್ಬ ಜೀವ ಕಳೆದುಕೊಂಡಿದ್ದಾನೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಸವರಾಜು (14) ಎಂಬಾತ ಮೃತಪಟ್ಟವ. ಈತ ಪುರಾತನ ಬಾವಿಯಲ್ಲಿ ಈಜುವ ಸಾಹಸಕ್ಕೆ ಮುಂದಾಗಿ ಸಾವಿಗೀಡಾಗಿದ್ದಾನೆ.

ಸುಮಾರು ಐನೂರು ವರ್ಷಗಳ ಇತಿಹಾಸ ಹೊಂದಿರುವ, ಸೊಸೆಯಂದಿರ ಬಾವಿ ಎಂದೇ ಕರೆಯಲಾಗುವ ಈ ಪುರಾತನ ಬಾವಿಯಲ್ಲಿ ಈತ ಮಧ್ಯಾಹ್ನ ಸ್ನೇಹಿತರ ಜತೆ ಈಜಲು ತೆರಳಿದ್ದ. ಆದರೆ ಈಜಲು ಆಗದೆ ಮುಳುಗಿ ಮೃತಪಟ್ಟಿದ್ದಾನೆ.

ಬಸವರಾಜು ನೀರಿನಲ್ಲಿ ಮುಳುಗಿದ ಕುರಿತು ಸ್ನೇಹಿತರು ತಿಳಿಸಿದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅವರು ತಕ್ಷಣ ಧಾವಿಸಿ ಕಾರ್ಯಾಚರಣೆಗೆ ಮುಂದಾದರೂ ಸುಮಾರು ನಾಲ್ಕು ಗಂಟೆಗಳ ಕಾಲ ಬಸವರಾಜು ಪತ್ತೆ ಆಗಿರಲಿಲ್ಲ. ಆ ಬಳಿಕ ಆತನ ಶವ ಸಿಕ್ಕಿದೆ. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net