ಸಿಡಿಲು ಬಡಿದು ಬಾಲಕನಿಗೆ ಗಾಯ, 11 ಕುರಿಗಳು ಬಲಿ

Sheep dead in hanagal
Published on

ಹಾನಗಲ್ಲ: ಬುಧವಾರ ಸಂಜೆ ತಾಲೂಕಿನಾದ್ಯಂತ ಸುರಿದ ಮಳೆಗೆ ಓರ್ವ ಬಾಲಕ ಗಾಯಗೊಂಡಿದ್ದು, 15ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ಘಟನೆ ಜರುಗಿದೆ.

ತಾಲೂಕಿನ ಕಂಚಿನೆಗಳೂರ ಗ್ರಾಮದ ಮನೆಯ ಎದುರಿನಲ್ಲಿ ಆಟವಾಡುತ್ತಿದ್ದ ಮಹಾಂತೇಶ ಫಕೀರಪ್ಪ ಕರಡಿ ಎಂಬ 9 ವರ್ಷದ ಬಾಲಕನಿಗೆ ಸಿಡಿಲು ಬಡಿದು ತೀವೃವಾಗಿ ಗಾಯಗೊಂಡಿದ್ದಾನೆ. ಹಾನಗಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅದೇ ದಿನ ರಾತ್ರಿ ತಾಲೂಕಿನ ಬೆಳಗಾಲಪೇಟೆ ಸಮೀಪದ ಆಲದಕಟ್ಟಿ ಗ್ರಾಮದ ನಿವಾಸಿ ಸಿದ್ದಪ್ಪ ಬೀರಪ್ಪ ಕತ್ತಿ ಎಂಬುವವರ 11 ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಐದು ಕುರಿಗಳಿಗೆ ಸುಟ್ಟ ಗಾಯಗಳಾಗಿದ್ದು, ಹಾನಗಲ್ಲಿನ ಪಶುವೈದ್ಯ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗಿರೀಶ ರೆಡ್ಡೇರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net