ಬಾಲಕ ಭದ್ರಾ ನದಿಗೆ ಬಿದ್ದು ಸಾವು

kls b
ಪೃಥ್ವಿರಾಜ್
Published on

ಕಳಸ: ನೆಲ್ಲಿಬೀಡು ಗ್ರಾಮದಲ್ಲಿ ಶುಕ್ರವಾರ ಸೌದೆ ತರಲು ಹೋದ ಬಾಲಕ ಭದ್ರಾ ನದಿಗೆ ಬಿದ್ದು ಮೃತಪಟ್ಟಿದ್ದಾನೆ.

ನೆಲ್ಲಿಬೀಡು ಗ್ರಾಮದ ಪೃಥ್ವಿರಾಜ್ (17) ಮೃತ ದುರ್ದೈವಿ. ಪೃಥ್ವಿರಾಜ್ ಬೆಂಗಳೂರಿನಲ್ಲಿ ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಎರಡು ದಿನದ ಹಿಂದೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ. ಶುಕ್ರವಾರ ಬೆಳಗ್ಗೆ ಸ್ನೇಹಿತನ ಜತೆ ಸೌದೆ ತರಲು ಹೋಗಿದ್ದಾಗ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದೇನೆ. ಸ್ಥಳೀಯರ ನೆರವಿನಿಂದ ಮೃತದೇಹವನ್ನು ಮೇಲೆತ್ತಿ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net