ಬಾಲಕನಿಂದ ಸ್ಕೂಟಿ ಚಾಲನೆ, 25 ಸಾವಿರ ರೂ.ದಂಡ

19mdg 3
Published on

ಮೂಡಿಗೆರೆ: ಅಪ್ರಾಪ್ತ ವಯಸ್ಸಿನ ಬಾಲಕ ಸ್ಕೂಟಿ ಚಲಾಯಿಸಿದ್ದಕ್ಕೆ ಆತನ ಪಾಲಕರಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ. ಏ.4 ರಂದು ಪಟ್ಟಣದಲ್ಲಿ ಪಿಎಸ್‌ಐ ಶ್ರೀನಾಥ್ ರೆಡ್ಡಿ ಅವರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ, ಅಪ್ರಾಪ್ತ ಬಾಲಕ ಸ್ಕೂಟಿಚಲಾಯಿಸಿಕೊಂಡು ಬಂದಿದ್ದಾನೆ. ಆತನನ್ನು ಪೊಲೀಸರು ತಡೆದು ಸ್ಕೂಟಿ ದಾಖಲೆ ಪರಿಶೀಲಿಸಿದ್ದಾಗ ಸ್ಕೂಟಿ ಬಾಪುನಗರದ ನಿವಾಸಿಯೊಬ್ಬರಿಗೆ ಸೇರಿದೆ ಗೊತ್ತಾಗಿದೆ. ಅಪ್ರಾಪ್ತನಿಗೆ ಸ್ಕೂಟಿ ಚಾಲನೆ ಮಾಡಲು ನೀಡಿದ ಆರೋಪದಲ್ಲಿ ಬಾಲಕನ ಪಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ ಮೂಡಿಗೆರೆ ಜೆಎಂಎಫ್‌ಸಿ ನ್ಯಾಯಾಲದ ನ್ಯಾಯಾಧೀಶರು ಏ.15ರಂದು ಸ್ಕೂಟಿಯ ಮಾಲೀಕನಿಗೆ 25 ಸಾವಿರ ದಂಡ ವಿಧಿಸಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರು ವಾಹನ ಚಾಲನೆ ಮಾಡುವುದು ಮಾಮೂಲಿಯಾಗಿದೆ. ಈಗ ನ್ಯಾಯಾಲಯದ ತೀರ್ಪು ವಾಹನ ಮಾಲೀಕರಿಗೆ ಬಹುದೊಡ್ಡ ಪಾಠವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net