ತೀವ್ರ ಸುಟ್ಟಗಾಯಗಳಾಗಿದ್ದ ಬಾಲಕ ಸಾವು

Published on

ಮೈಸೂರು:  ಮೈ ಮೇಲೆ ಬಿಸಿ ಎಣ್ಣೆ ಬಿದ್ದು ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಾಂಧಿ ನಗರದ ಲಕ್ಷ್ಮಣ್ ಅವರ ಪುತ್ರ ಅನ್ವಿಶ್(4) ಮೃತಪಟ್ಟಿದ್ದಾನೆ.

ಲಕ್ಷ್ಮಣ್‌ಎರಡು ದಿನಗಳ ಹಿಂದೆ ಪುತ್ರನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಎನ್.ಆರ್. ಮೊಹಲ್ಲಾ ಮಾರುತಿ ಸರ್ಕಲ್ ಬಳಿ ತೆರಳಿದ್ದಾರೆ. ಸರ್ಕಲ್‌ನಲ್ಲಿ ಬೋಂಡಾ, ಬಜ್ಜಿ ಮಾಡುವ ಅಂಗಡಿ ಬಳಿ ಬೈಕ್‌ನಲ್ಲಿ ಮಗನನ್ನು ಕೂರಿಸಿ ಬಸ್ ನಿಲ್ದಾಣದ ಬಳಿ ತೆರಳಿದ್ದಾರೆ. ಈ ವೇಳೆ ಬೈಕ್ ಮೇಲೆ ಕುಳಿತಿದ್ದ ಅನ್ವಿಶ್ ಜಾರಿ ರಸ್ತೆ ಬದಿ ಬೋಂಡಾ, ಬಜ್ಜೆ ಮಾಡುತ್ತಿದ್ದ ಬಿಸಿಯಾಗಿದ್ದ ಎಣ್ಣೆ ಬಾಂಡಲಿಗೆ ಬಿದ್ದಿದ್ದಾನೆ. ತೀವ್ರ ಸುಟ್ಟ ಗಾಯವಾಗಿದ್ದ ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net