ಕೊಂಬೆ ಮುರಿದುಬಿದ್ದು ಬಾಲಕ ಸ್ಥಳದಲ್ಲೇ ಸಾವು

10 05 2025_BNG_RURAL_PAGE_5A
Published on

ವಿಜಯಪುರ: ಪಟ್ಟಣದಿಂದ ದೇವನಹಳ್ಳಿಯ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿರುವ ಅಶೋಕ ನಗರದ ಕ್ರಾಸ್​ ಬಳಿ ಶುಕ್ರವಾರ ಮಾವಿನ ಮರದ ಕೊಂಬೆ ಮುರಿದು ಬಿದ್ದು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಬಾಲಕ ಮೃತಪಟ್ಟಿದ್ದು, ಅವರ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಧ್ರಮೂಲದ ಪೊದ್ದಟೂರಿನ ವರುಣ್​ (15) ಮೃತಪಟ್ಟಿದ್ದು, ಆತನ ತಂದೆ ಮುರಳೀಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್​ನ ಹಿಂದೆ ಕುಳಿತಿದ್ದ ವರುಣ್​ ಕುತ್ತಿಗೆಗೆ ಬಲವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡ ಮುರಳೀಕೃಷ್ಣಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಂಧ್ರದ ಪೊದ್ದಟೂರಿನಿಂದ 30 ವರ್ಷಗಳ ಹಿಂದೆ ವಿಜಯಪುರಕ್ಕೆ ಬಂದು ನೆಲೆಸಿದ್ದ ಮುರಳೀಕೃಷ್ಣ ಅವರ ಕುಟುಂಬದವರು, ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net