ಹಾವು ಕಚ್ಚಿ ಬಾಲಕ ಸಾವು

IMG_20240227_160637
Published on

ಬೈಲಕುಪ್ಪೆ: ಕೊಪ್ಪ ಸಮೀಪ ಕಾವೇರಿ ಬಡಾವಣೆಯಲ್ಲಿ ಸೋಮವಾರ ರಾತ್ರಿ ಹಾವು ಕಚ್ಚಿ ಬಾಲಕ ಮೃತಪಟ್ಟಿದ್ದಾನೆ.

ಹೊನ್ನಪ್ಪ ಅವರ ಪುತ್ರ ದೇವಯ್ಯ(9) ಮೃತ. ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸಮೀಪ ಕಾವೇರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಮಲಗಿದ್ದ ವೇಳೆ ಹಾವು ಕಚ್ಚಿದೆ. ಬಾಲಕ ಎಚ್ಚರಗೊಂಡು ಉರಿ ಎಂದು ಕಿರಿಚಾಡಿದ್ದಾನೆ. ಮಲಗಿದ್ದ ಪಾಲಕರು ಲೈಟ್ ಹಾಕಿ ನೋಡುವಷ್ಟರಲ್ಲಿ ಹಾವು ಕಾಣಿಸಿಕೊಂಡಿದೆ. ತಕ್ಷಣ ಬಾಲಕರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ. ಈ ಕುರಿತು ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net