ವಿದ್ಯುತ್ ತಗುಲಿ ಬಾಲಕ ಸಾವು

crime-logo
Published on

ಜಗಳೂರು: ಇಲ್ಲಿನ ಬೈಪಾಸ್ ರಸ್ತೆಯ ಚಿಕನ್ ಸೆಂಟರ್‌ನಲ್ಲಿ ವಿದ್ಯುತ್ ಪ್ರವಹಿಸಿ ಅಶ್ವಥರೆಡ್ಡಿ ಬಡಾವಣೆಯ ಬಾಲಕ ಕೃಷ್ಣ (15) ಮೃತಪಟ್ಟಿದ್ದಾನೆ.

ಮಂಗಳವಾರ ಚಿಕನ್ ಕೊಳ್ಳಲು ಅಂಗಡಿಗೆ ತೆರಳಿದ್ದ ಬಾಲಕ ಕೃಷ್ಣ, ಅಲ್ಲಿ ಕೋಳಿ ಕ್ಲೀನ್ ಮಾಡುವ ಯಂತ್ರ ಮುಟ್ಟಿದಾಗ ವಿದ್ಯುತ್ ಪ್ರವಹಿಸಿದೆ. ತಕ್ಷಣ ಆತನನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಈ ಕುರಿತು ಮೃತರ ತಂದೆ ಕಾಳ್ಯ ಗೋಸಾವಿ ಅವರು ಚಿಕನ್ ಸೆಂಟರ್ ಮಾಲೀಕನ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net