

ಅಥಣಿ ಗ್ರಾಮೀಣ: ಗೆಳೆಯರೊಂದಿಗೆ ಆಟವಾಡಲು ಹೋದ ವೇಳೆ ಕಾಲುಜಾರಿ ಕೆರೆಯಲ್ಲಿ ಬಿದ್ದು ಬಾಲಕ ಮೃತಪಟ್ಟ ಟನೆ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಚಿಕ್ಕೂಡ ಗ್ರಾಮದ ಮನೋಜ ಗಿಡ್ಡಪ್ಪ ವಡ್ಡರ (5) ಮೃತ. ಗೆಳೆಯರ ಜತೆ ಕೆರೆಯ ದಡಕ್ಕೆ ಹೋಗಿ ಆಟವಾಡುತ್ತಿದ್ದಾಗ ಕಾಲುಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆಂದು ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಎಸ್ಐ ರಂಗರೆಡ್ಡಿ ವಂಟಗೂಡಿ, ತನಿಖಾ ಸಹಾಯಕ ಶ್ರೀನಾಥ ಅವಟಿ ಭೇಟಿ ನೀಡಿ ಪರಿಶೀಲಿಸಿದರು.