ಬೈಕ್‌ಗೆ ಕಾರು ಡಿಕ್ಕಿಯಾಗಿ ಬಾಲಕ ಸಾವು

car accident
Published on

ಮೈಸೂರು: ಹುಣಸೂರು ರಸ್ತೆಯ ಇಲವಾಲದ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ 5 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕಿನಲ್ಲಿದ್ದ ಬಾಲಕನ ಪಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಜನತಾನಗರದ ನಿವಾಸಿ, ಬೈಕ್ ಸವಾರ ಅಭಿಷೇಕ್ ಅವರ ಪುತ್ರ ಲಿಖೇಶ್ ಮೃತ ಬಾಲಕ. ಗಾಯಗೊಂಡಿರುವ ಬಾಲಕನ ತಂದೆ ಅಭಿಷೇಕ, ತಾಯಿ ದಿವ್ಯಶ್ರೀ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.


ಭಾನುವಾರ ಮಧ್ಯಾಹ್ನ ಅಭಿಷೇಕ್ ಅವರು ಪತ್ನಿ ಮತ್ತು ಪುತ್ರನೊಂದಿಗೆ ಬೈಕ್‌ನಲ್ಲಿ ಮೈಸೂರಿನ ಕಡೆ ಬರುತ್ತಿದ್ದರು. ಹಿಂಭಾಗದಿಂದ ಬಂದ ಕಾರ್ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಬಾಲಕ ಕೊನೆಯುಸಿರೆಳೆದಿದ್ದಾನೆ. ದಿವ್ಯಾಶ್ರೀ ಅವರ ತಂದೆ ಶಿವಲಿಂಗು ನೀಡಿರುವ ದೂರಿನ ಅನ್ವಯ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net