ಯಾವುದೋ ವಾಹನ ಡಿಕ್ಕಿಯಾಗಿ ಬಾಲಕ ಸಾವು

Crime Logo
Published on

ಸವಣೂರ: ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೆ ಮೃತಪಟ್ಟ ಟನೆ ತಾಲೂಕಿನ ಕಲಿವಾಳ ಗ್ರಾಮದ ಬಳಿ ಗುರುವಾರ ನಡೆದಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲ ಗ್ರಾಮದ ಸಂಜು ಉದಯಕುಮಾರ ಅಂಬ್ಲಿ (11) ಮೃತ ಬಾಲಕ.

ಈತ ತನ್ನ ಸಂಬಂಧಿ ಜತೆ ಬೈಕ್​ ಮೇಲೆ ತೆರಳುತ್ತಿದ್ದ ಸಮಯದಲ್ಲಿ ಮೂತ್ರವಿಸರ್ಜನೆಗಾಗಿ ಬೈಕ್​ಅನ್ನು ರಸ್ತೆ ಬದಿ ನಿಲ್ಲಿಸಿ ಕೆಳಗೆ ಇಳಿದಿದ್ದ. ಈ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net