ಚೆಕ್ ಡ್ಯಾಂನಲ್ಲಿ ಮುಳುಗಿ ಬಾಲಕ ಸಾವು

crime
Published on

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಹೊಸಮಠ ಮುಂಭಾಗವಿರುವ ಚೆಕ್ ಡ್ಯಾಂನಲ್ಲಿ ಭಾನುವಾರ ಸ್ನೇಹಿತರೊಟ್ಟಿಗೆ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ.

ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದ ನಿವಾಸಿಗಳಾದ ಗೋಪಾಲ್ ಮತ್ತು ಸುಮಾ ದಂಪತಿ ಪುತ್ರ ಸಮರ್ಥ್ (17)ಮೃತ ಬಾಲಕ.

ಈತ ತನ್ನ ಊರಿನವರೊಟ್ಟಿಗೆ ಚಿಕ್ಕಲ್ಲೂರು ದೇವಸ್ಥಾನಕ್ಕೆ ಆಗಮಿಸಿದ್ದನು. ಈ ವೇಳೆ ತನ್ನ ಐದಾರು ಜನರ ಸ್ನೇಹಿತರ ಜತೆ ಹೊಸಮಠ ಮುಂಭಾಗವಿರುವ ಚೆಕ್‌ಡ್ಯಾಂನಲ್ಲಿ ಈಜಲು ನೀರಿಗಿಳಿದಾಗ ಈಜಲಾಗದೆ ಮುಳುಗಿದ್ದಾನೆ. ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನುರಿತ ಈಜುಗಾರರು ಬಾಲಕನ ಮೃತದೇಹವನ್ನು ಮೇಲೆತ್ತಿದ್ದಾರೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net