ಹುಲಿಗಿಗೆ ತೆರಳಿದ್ದ ಯುವಕ ನದಿಗೆ ಬಿದ್ದು ಸಾವು

boy died huligi tungabhadra river koppal temple
Published on

ಕೊಪ್ಪಳ: ಹುಣ್ಣಿಮೆ ಅಂಗವಾಗಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮನ ದರ್ಶನಕ್ಕೆ ತೆರಳಿದ್ದ ಯುವಕ ಕಾಲು ಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಯಲಬುರ್ಗಾ ತಾಲೂಕಿನ ಕುದ್ರಿಕೊಟಗಿ ಗ್ರಾಮದ ಕನಕಪ್ಪ (17) ಕುಟುಂಬದೊಂದಿಗೆ ಹುಲಿಗೆಮ್ಮನ ದರ್ಶನಕ್ಕೆ ತೆರಳಿದ್ದ. ಸಂಜೆ ನದಿ ಬಳಿ ನೀರು ಕುಡಿಯಲೆಂದು ಹೋದಾಗ ಆಕಸ್ಮಾತಾಗಿ ಬಿದ್ದು ನಾಪತ್ತೆಯಾಗಿದ್ದ.

ಸಂಜೆಯಿಂದ ಯುವಕನ ಪತ್ತೆಗಾಗಿ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇಂದು ಮಧ್ಯಾಹ್ನ ಯುವಕ ಶವವಾಗಿ ಪತ್ತೆಯಾಗಿದ್ದಾನೆ.

'ದೇವರ ಬಳಿ ಬಂದರೂ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ' ಎಂದು ಕುಟುಂಬದವರ ಆಕ್ರಂದನ ನೋಡುಗರು ಕಣ್ಣೀರು ಹಾಕುವಂತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net