ಬೀದಿನಾಯಿ ಕಡಿತಕ್ಕೆ ಬಾಲಕ ಬಲಿ; ಆಟವಾಡುತ್ತಿದ್ದಾಗ ಕಚ್ಚಿದ ನಾಯಿ..

Yashwanth
Published on

ಚಿತ್ರದುರ್ಗ: ಆಟ ಆಡುತ್ತಿದ್ದಾಗ ಬೀದಿನಾಯಿ ಕಡಿತಕ್ಕೆ ಒಳಗಾಗಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಮೇದೆಹಳ್ಳಿ ಬಿಳಿಕಲ್ಲು ನಾಯಕರಹಟ್ಟಿ ನಿವಾಸಿ ಯಶವಂತ್ (8) ಸಾವಿಗೀಡಾದ ಬಾಲಕ.

ನಾಯಿ ಕಡಿತಕ್ಕೆ ಒಳಗಾಗಿದ್ದ ಈ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ವೆನ್​ಲಾಕ್​ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಅಸುನೀಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಟೆ ಠಾಣೆ ಪಿಐ ರಮೇಶ್ ತಿಳಿಸಿದ್ದಾರೆ.

ಕೇಶವಮೂರ್ತಿ ಎಂಬವರ ಪುತ್ರ ಯಶವಂತ್ ಮನೆ ಮುಂದೆ ಆಟವಾಡುತ್ತಿದ್ದಾಗ, ಬೀದಿನಾಯಿಯೊಂದು ಐದಾರು ಬಾರಿ ಕಚ್ಚಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net