ಮಾವಿನ ಕಾಯಿ ಕೀಳಲು ಹೋದ ಯುವಕ ಸಾವು

Oplus_131072
Oplus_131072
Published on

ಹಲಗೂರು: ಸಮೀಪದ ಮಾರಗೌಡನಹಳ್ಳಿ ಗ್ರಾಮದ ಇಗ್ಗಲೂರು ನಾಲೆ ಬಳಿ ಜಮೀನಿನಲ್ಲಿ ಶನಿವಾರ ಮಾವಿನ ಕಾಯಿ ಕೀಳಲು ಹೋಗಿದ್ದ ಯುವಕನಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮಾರಗೌಡನಹಳ್ಳಿ ಗ್ರಾಮದ ಕುಮಾರಾಚಾರಿ ಪುತ್ರ ಸಂಜಯ್ (16) ಮೃತ. ನಿಟ್ಟೂರು ಕೋಡಿಹಳ್ಳಿ-ಮಾರಗೌಡನ ಹಳ್ಳಿಯ ಇಗ್ಗಲೂರು ನಾಲೆ ಬಳಿಯ ಕುಮಾರ ಅವರಿಗೆ ಸೇರಿದ ಜಮೀನಿನಲ್ಲಿ ಮಾವಿನ ಕಾಯಿ ಕೀಳಲು ಹೋಗಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಮೃತ ಪಟ್ಟಿದ್ದಾನೆ. ಮಾವಿನ ಮರದ ಕೊಂಬೆ ವಿದ್ಯುತ್ ತಂತಿಗೆ ಸ್ಪರ್ಶಿಸಿದ್ದರಿಂದ ಮೃತ ಪಟ್ಟಿದ್ದಾನೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net