ಕುಸಿದು ಬಿದ್ದು ಯುವಕ ಸಾವು

Untitled-1
Published on

ಉಡುಪಿ: ಹೋಟೆಲ್‌ನಿಂದ ಊಟ ಮುಗಿಸಿ ಹೊರಬರುವಾಗ ಯುವಕನೊಬ್ಬ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಉದ್ಯಾವರ ಸಂಪಿಗೆನಗರ ನಿವಾಸಿ ಸಚಿನ್(23) ಮೃತಪಟ್ಟವರು. ಭಾನುವಾರ ಮಧ್ಯಾಹ್ನ ಆದಿ ಉಡುಪಿ ಪಂದುಬೆಟ್ಟಿನಲ್ಲಿರುವ ವಿಲೇಜ್ ಇನ್‌ಬಾರ್‌ನಲ್ಲಿ ಊಟ ಮುಗಿಸಿ, ಮಧ್ಯಾಹ್ನ 2.30ಕ್ಕೆ ಹೊರಗೆ ಬರುವಾಗ ಸಚಿನ್ ಅವರು ಒಮ್ಮೆಲೆ ಕುಸಿದು ಬಿದ್ದಿದ್ದಾರೆ.

ಕೂಡಲೇ ಚಿಕಿತ್ಸೆಯ ಬಗ್ಗೆ ಮೊದಲಿಗೆ ಹೈಟೆಕ್ ಆಸ್ಪತ್ರೆಗೆ ಬಳಿಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಯುವಕ ಮೃತಪಟ್ಟಿದ್ದಾರೆ.

ಯುವಕನಿಗೆ ಕುಸಿದು ಬೀಳುವ ಆರೋಗ್ಯ ಸಮಸ್ಯೆ ಇದ್ದು, ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇರಬಹುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net