ಈಜುಕೊಳಕ್ಕೆ ಬಿದ್ದು ಬಾಲಕ ಮೃತ್ಯು

drowning
Published on

ಈಶ್ವರಮಂಗಲ: ಪುತ್ತೂರು ತಾಲೂಕಿನ ಪಾಣಾಜೆ ಅಪಿನಿಮೂಲೆ ಎಂಬಲ್ಲಿ ಗುರುವಾರ ಸಂಜೆ ಮೂರೂವರೆ ವರ್ಷದ ಬಾಲಕನೊಬ್ಬ ನೆರೆಮನೆಯವರ ತೋಟದಲ್ಲಿದ್ದ ಈಜುಕೊಳಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ಪಾಣಾಜೆ ಗ್ರಾಮದ ಅಪಿನಿಮೂಲೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮತ್ತು ಆಶ್ಮಾ ದಂಪತಿ ಪುತ್ರ ಮಹಮ್ಮದ್ ಸಾನಿದ್ ಮೃತ ಬಾಲಕ.

ಮನೆ ವರಾಂಡದಲ್ಲಿ ಗುರುವಾರ ಸಂಜೆ ಆಟವಾಡಿಕೊಂಡಿದ್ದ ಮಹಮ್ಮದ್ ಸಾನಿದ್ ಕಾಣಿಸದೆ ಇದ್ದಾಗ ಮನೆಯವರು ಸುತ್ತಮುತ್ತ ಹುಡುಕಾಡಿದ್ದಾರೆ.

ಈ ಸಂದರ್ಭ ನೆರೆಮನೆಯ ರಾಮ್ ಕುಮಾರ್ ಎಂಬುವರಿಗೆ ಸೇರಿದ ತೋಟದಲ್ಲಿ ಮಕ್ಕಳಿಗಾಗಿ ನಿರ್ಮಿಸಿದ್ದ ಈಜು ಕೊಳದಲ್ಲಿ ಮಹಮ್ಮದ್ ಸಾನಿದ್ ತೇಲುತ್ತಿದ್ದುದು ಕಂಡುಬಂದಿದೆ. ತಕ್ಷಣ ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ. ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net